ಸನ್ಮಾರ್ಗ ವಾರ್ತೆ
ಇಸ್ಲಾಮಾಬಾದ್, ಮಾ. 17: ಕೊರೊನಾ ಪಾಕಿಸ್ತಾನದಲ್ಲಿಯೂ ಹರಡುತ್ತಿದ್ದು 48 ಗಂಟೆಗಳಲ್ಲಿ ಹನ್ನೆರಡಕ್ಕೂ ಹೆಚ್ಚು ಮಂದಿಯಲ್ಲಿ ರೋಗ ಕಂಡು ಬಂದಿದೆ. ಇದುವರೆಗೆ ಅಲ್ಲಿ 186 ಮಂದಿಗೆ ದೃಢಪಟ್ಟಿದ್ದು ಅತಿಹೆಚ್ಚು ಕೊರೊನಾ ಪೀಡಿತರು ಸಿಂಧ್ ಪ್ರಾಂತದಲ್ಲಿದ್ದಾರೆ. ಇಲ್ಲಿಂದಲೇ 146 ಪ್ರಕರಣಗಳು ವರದಿಯಾಗಿದೆ. ಕೈಬರ್ ಫಖ್ತೂನ್ವಾ, ಪಂಚಾಬ್, ಬಲೂಚಿಸ್ತಾನ್ಗಳಲ್ಲಿ ಹೊಸದಾಗಿ ರೋಗ ಪೀಡಿತರು ಕಂಡು ಬಂದರು. ಇರಾನಿನಿಂದ ಬಂದವರಿಗೆ ಇಲ್ಲಿ ಹೆಚ್ಚು ರೋಗ ಕಂಡು ಬಂದಿದೆ. ಸಿಂಧ್ ಪ್ರಾಂತ್ಯದ ಸುಕೂರಿನಲ್ಲಿ 119 ಮಂದಿಗೆ,ಖಿಯಿ ಎಂಬಲ್ಲಿ 26 ಮಂದಿ ಮತ್ತು ಹೈದಿಲು ಎಂಬಲ್ಲಿ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. ಇವರ ಮೇಲೆ ವಿಶೇಷ ನಿಗಾ ಇರಿಸಲಾಗಿದೆ ಎಂದು ಸಿಂಧ್ ಪ್ರಾಂತದ ಅಧಿಕಾರಿ ವಹಾಬ್ ತಿಳಿಸಿದ್ದಾರೆ.
ಕೈಬರ್ ಪಖ್ತೂನ್ವಾದಲ್ಲಿ ಹದಿನೈದು ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.












