ಸನ್ಮಾರ್ಗ ವಾರ್ತೆ
ಪೊನ್ನಾಣಿ(ಕೇರಳ), ಮಾ.17: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರಕಾರ ಹೇರಿದ ನಿಷೇಧವನ್ನು ಉಲ್ಲಂಘಿಸಿ ಸ್ವಲಾತ್ ವಾರ್ಷಿಕ ಆಯೋಜಿಸಿದವರ ವಿರುದ್ಧ ಪೊನ್ನಾಣಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೋಮವಾರ ರಾತ್ರೆ ಹತ್ತು ಗಂಟೆಗೆ ಪುದುಪೊನ್ನಾಣಿ ತರ್ಬಿಯತ್ತುಲ್ ಇಸ್ಲಾಮಿಕ್ ಚಾರಿಟೇಬಲ್ ಟ್ರಸ್ಟ್ ಎಂಬ ಖಾಸಗಿ ಸಂಘಟನೆ ನೇತೃತ್ವದಲ್ಲಿ ಸಲಾತ್ ಸಂಘಟಿಸಲಾಗಿತ್ತು. ಮಹಿಳೆಯರು ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಜತೆಗೆ ಉಮ್ರಾ ಯಾತ್ರೆಗೆ ಹೋಗಿ ಬಂದವರೂ ಪಾಲ್ಗೊಂಡಿದ್ದರು.
ವಿಷಯದ ತಿಳಿದು ಪೊಲೀಸರು ಸಲಾತ್ ಸಂಘಟಿಸಿದವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ವರದಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಎಲ್ಲ ಸಾರ್ವಜನಿಕ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮಗಳನ್ನು ಮುಂದೂಡಬೇಕೆಂದು ಜಿಲ್ಲಾಡಳಿತ, ನರಗಸಭೆ ಸೂಚನೆ ಹೊರಡಿಸಿತ್ತು. ಇದನ್ನು ಉಲ್ಲಂಘಿಸಿದರೆ ರೋಗ ಹರಡುವ ಸಾಧ್ಯತೆಯಿದೆ. ಈ ರೀತಿ ಯಲ್ಲಿ ನೂರಾರು ಮಂದಿ ಸೇರುವ ಕಾರ್ಯಕ್ರಮ ಸಂಘಟಿಸಲಾಗಿದೆ ಎಂಬ ವರದಿಯ ಆಧಾರದಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊನ್ನಾಣಿ ಸಿಐ ಸಣ್ಣಿ ಚಾಕೊ ತಿಳಿಸಿದರು.












