ಕೇಂದ್ರ ಸಚಿವರು ಕೊರೊನಾ ನಿಗಾದಲ್ಲಿ

0
530

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 17: ಕೇಂದ್ರ ಸಚಿವ ವಿ. ಮುರಳೀಧರನ್ ಕೊರೊನಾ ನಿಗಾಕ್ಕೊಳಗಾಗಿದ್ದಾರೆ. ವಿದೇಶಕ್ಕೆ ಹೋಗಿ ಬಂದಿರುವ ವೈದ್ಯರ ಜೊತೆ ಸಭೆಯೊಂದರಲ್ಲಿ ಅವರು ಭಾಗವಹಿಸಿದ್ದರು. ನಂತರ ಸ್ವಯಂ ನಿರೀಕ್ಷಣೆಯಲ್ಲಿರಲು ಮುರಳೀಧರ್ ಬಯಸಿದರು ಎನ್ನಲಾಗಿದೆ. ದಿಲ್ಲಿಯ ಅವರ ಮನೆಯಲ್ಲಿ ಅವರು ಈಗ ನಿಗಾದಲ್ಲಿದ್ದಾರೆ. ಕೇರಳದ ಕೇಂದ್ರ ಸಹ ಸಚಿವರಾಗಿರುವ ಮುರಳೀಧರನ್ 12ನೆ ತಾರೀಕಿಗೆ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಅಂದಿನ ಸಭೆಯಲ್ಲಿ ರೋಗ ಇರುವವರು ಬಂದಿರಲಿಲ್ಲ ಎಂದು ಶ್ರೀಚಿತ್ರ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಕೊರೊನಾ ದೃಢಪಟ್ಟಿರುವ ವೈದ್ಯರೊಂದಿಗೆ ಯಾವುದೇ ರೀತಿಯ ಸಂಪರ್ಕ ಮುರಳೀಧರನ್‍ರಿಗಾಗಿಲ್ಲ. ಆದರೂ ಅವರು ಸ್ವಯಂ ನಿಗಾದಲ್ಲಿರಲು ಬಯಸಿದ್ದಾರೆ.

ತಿರುವನಂತಪುರಂ ಶ್ರೀಚಿತ್ರ ಆಸ್ಪತ್ರೆಯ ಚಟುವಟಿಕೆಯೇ ಸ್ಥಂಭಿಸಿದೆ. ಇದು ಅಲ್ಲಿನ ವೈದ್ಯರಿಗೆ ಕೊರೊನಾ ತಗಲಿದ್ದು ಬಯಲಾದ ನಂತರ ಆಗಿರುವ ಬದಲಾವಣೆಯಾಗಿದ್ದು, ಮೆಡಿಕಲ್ ಸೂಪರಿಟೆಂಡೆಂಟ್ ಮತ್ತು ಹೆಚ್ಚಿನ ವಿಭಾಗದ ಮುಖ್ಯಸ್ಥರು ನಿರೀಕ್ಷಣೆಯಲ್ಲಿದ್ದಾರೆ. ಈ ಹಿಂದೆ ಸ್ಪೈನ್‍ಗೆ ಹೋಗಿ ಬಂದ ಡೆಪ್ಯುಟಿ ಡೈರಕ್ಟರ್ ರನ್ನು ಮನೆಯಲ್ಲಿರಲು ಸೂಚಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.