ನಾವು ಯುದ್ಧರಂಗದಲ್ಲಿದ್ದೇವೆ- ಫ್ರೆಂಚ್ ಅಧ್ಯಕ್ಷ

0
546

ಸನ್ಮಾರ್ಗ ವಾರ್ತೆ

ಡ್ಯೂರಿಚ್, ಮಾ. 17: ಕೊರೊನಾ ಹಿನ್ನೆಲೆಯಲ್ಲಿ ಜನರಿಗೆ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ ಫ್ರೆಂಚ್ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರೋನ್, ಎಲ್ಲರೂ ಮನೆಯೊಳಗೆ ಇರಿ. ಅಗತ್ಯ ಹಂತದಲ್ಲಿ ಮಾತ್ರ ಹೊರಬಂದರೆ ಸಾಕು. ಇದನ್ನು ಲಘುವಾಗಿ ತೆಗೆಯುವಂತಿಲ್ಲ ಎಂದು ಮ್ಯಾಕ್ರೋನ್ ಹೇಳಿದ್ದಾರೆ.

ಫ್ರಾನ್ಸ್ ನಲ್ಲಿ ವೈರಸ್ ಪೀಡಿತರಾಗಿ 21 ಮಂದಿ ಮೃತಪಟ್ಟಿರುವ ನಂತರ ಅಧ್ಯಕ್ಷರ ಹೇಳಿಕೆ ಹೊರಬಂದಿದೆ. ಕಳೆದ 24 ಗಂಟೆಗಳಲ್ಲಿ 1210 ಹೊಸ ಪ್ರಕರಣಗಳು ಪ್ರಾನ್ಸ್ ನಲ್ಲಿ ಬೆಳಕಿಗೆ ಬಂದಿದ್ದು, 120 ಮಂದಿ ಮೃತಪಟ್ಟಿದ್ದಾರೆ.