ಆಸ್ಟ್ರೇಲಿಯಾದ ಬಾಲಕ ಕ್ವಾರ್ಡನ್‍ಗೆ ಮಲಯಾಳಂ ಸಿನೆಮಾದಲ್ಲಿ ಅವಕಾಶ: ಗಿನ್ನೆಸ್ ಫಕ್ರುರ ಫೇಸ್‍ಬುಕ್ ಪೋಸ್ಟ್

0
600

ಸನ್ಮಾರ್ಗ ವಾರ್ತೆ

ಕಡಿಮೆ ಎತ್ತರದ ಹೆಸರಿನಲ್ಲಿ ಸಹಪಾಠಿಗಳಿಂದ ತಮಾಷೆಗೊಳಗಾಗಿ ಅಳುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಕ್ವಾರ್ಡನ್‍ಗೆ ಮಲಯಾಳಂ ಸಿನೆಮಾದಲ್ಲಿ ಅವಕಾಶದ ಬಾಗಿಲು ತೆರೆದಿದೆ. ಕ್ವಾರ್ಡನ್ ಅಳುವ ದೃಶ್ಯವನ್ನು ನೋಡಿದ ಜನರು ಆತನಿಗೆ ಬೆಂಬಲ ನೀಡಿದ್ದರು. ಇದೇ ವೇಳೆ ಬಾಲಕ ಕ್ವಾರ್ಡನ್‍ಗೆ ತನಗೂ ಸಿನೆಮಾದಲ್ಲಿ ನಟಿಸಬೇಕೆಂಬ ಆಸೆಯಿದೆ ಎಂದು ಹೇಳಿದ್ದನು.

ಕ್ವಾರ್ಡನ್‍ನ ಈ ಆಶೆಯನ್ನು ಈಡೇರಿಸಲು ಮಲೆಯಾಳಂ ಸಿನೆಮಾದ ಜಾನಕಿ ಕಲಾವಿದರು ಮುಂದೆ ಬಂದಿದ್ದಾರೆ. ಕ್ವಾರ್ಡನ್‍ಗೆ ಮಲೆಯಾಳಂ ಸಿನೆಮಾದಲ್ಲಿ ಅವಕಾಶ ಕೊಡುವುದಾಗಿ ಗಿನ್ನೆಸ್ ಪಕ್ರು ಫೇಸ್‍ಬುಕ್‍ನಲ್ಲಿ ತಿಳಿಸಿದ್ದಾರೆ. ಕೊರೊನಾ ರೋಗ ಭೀತಿ ಹೋದ ಬಳಿಕ ಕ್ವಾರ್ಡನ್‍ ನನ್ನು ಭೇಟಿಯಾಗುವುದಾಗಿ ಫಕ್ರು ಹೇಳಿದ್ದಾರೆ.