ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 23: ಕೊರೊನಾ ರೋಗದಿಂದ ಪಾರಾಗಲು ಸಾಮಾಜಿಕ ಮಾಧ್ಯಮದಲ್ಲಿ ಹಲವು ರೀತಿಯ ವೀಡಿಯೊಗಳು ವೈರಲ್ ಆಗುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮುಂದುವರಿಯುತ್ತಿದೆ. ಕೇರಳದ ಪೊಲೀಸರು ಡ್ಯಾನ್ಸ್ ಮಾಡುವ ವೀಡಿಯೊ ಈಗ ವೈರಲ್ ಆಗಿದೆ. ಪೊಲೀಸರು ಡ್ಯಾನ್ಸ್ ಮಾಡುತ್ತಿದ್ದಾರೆ. ಕೈ ತೊಳೆಯುವ ಸರಿಯಾದ ರೀತಿಯನ್ನು ತಿಳಿಸುತ್ತಿದ್ದಾರೆ. ಕೇರಳ ಪೊಲೀಸರ ಈ ವೀಡಿಯೊ ಭಾರೀ ಬೇಗನೆ ಪ್ರಚಾರವಾಯಿತು. ಎಲ್ಲೆಡೆಯೂ ಶೇರ್ ಆಯಿತು.
ಈ ವೀಡಿಯೊವನ್ನು ಸ್ಟೇಟ್ ಪೊಲೀಸ್ ಮೀಡಿಯ ಸೆಂಟರ್ ಕೇರಳ ಶೇರ್ ಮಾಡಿದ್ದು ಹೆದರಬೇಕಾಗಿಲ್ಲ -ಎಚ್ಚರವಹಿಸುವ ಅಗ್ಯವಿದೆ -ಬನ್ನಿ ಒಟ್ಟಿಗೆ ಕೆಲಸ ಮಾಡುವ- ಕೇರಳ ಪೊಲೀಸ್ ನಿಮ್ಮ ಜೊತೆಗಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊವನ್ನು ಈವರೆಗೆ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.












