ಸನ್ಮಾರ್ಗ ವಾರ್ತೆ
ಮುಂಬೈ, ಮಾ. 23: ದೇಶದಲ್ಲಿ ಕೊರೊನಾ ರೋಗಕ್ಕೆ ಮುಂಬೈಯ 68 ವರ್ಷದ ಫಿಲಿಪ್ಪೀನ್ಸ್ ನಿವಾಸಿ ಬಲಿಯಾಗಿದ್ದಾನೆ ಎಂದು ಎಎನ್ಐ ವರದಿ ಮಾಡಿದೆ. ಇದರೊಂದಿಗೆ ದೇಶದಲ್ಲಿ ಕೊರೊನಕ್ಕೆ ಬಲಿಯಾದವರ ಸಂಖ್ಯೆ ಎಂಟಕ್ಕೇರಿಕೆಯಾಗಿದೆ. ಇವರನ್ನು ಕಸ್ತೂರ್ ಬಾ ಆಸ್ಪತ್ರೆಯಿಂದ ಇನ್ನೊಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ರಕ್ಷಿಸಲು ಆಗಿಲ್ಲ. ಮೃತ ವ್ಯಕ್ತಿ ಕಿಡ್ನಿ, ಉಸಿರಾಟ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗಿದ್ದರು ಎಂದು ಸಾರ್ವಜನಿಕಾರೋಗ್ಯ ವಿಭಾಗ ತಿಳಿಸಿದೆ.
ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 400 ದಾಟಿ 419ಕ್ಕೆ ನೆಗೆದಿದೆ.












