ಸನ್ಮಾರ್ಗ ವಾರ್ತೆ
ಚೆನ್ನೈ, ಮಾ. 25; ಹಿಂದೂ ದೇವರನ್ನು ಆಕ್ಷೇಪಿಸಿ, ಆಚಾರಗಳನ್ನು ಅವಹೇಳನ ಮಾಡಿದ್ದರಿಂದ ಕೊರೊನಾ ಹರಡಿದೆಯೆಂದು ತಮಿಳ್ನಾಡಿನ ಕ್ಷೀರೋದ್ಯಮ ಸಚಿವ ರಾಜೇಂದ್ರ ಬಾಲಾಜಿ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಟ್ವೀಟ್ ಮಾಡಿದ ಗಂಟೆಗಳೊಳಗೆ ಸಚಿವರನ್ನು ಅಣ್ಣಾ ಡಿಎಂಕೆ ವಿರುದುನಗರ್ ಜಿಲ್ಲಾ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಲಾಗಿದೆ.
ಪಾರ್ಟಿ ಕೊ ಆರ್ಡಿನೇಟರ್ ಒ. ಪನ್ನೀರ್ ಸೆಲ್ವ, ಜಂಟಿ ಕೋಆರ್ಡಿನೇಟರ್ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಜಂಟಿಯಾಗಿ ತೀರ್ಮಾನ ಕೈಗೊಂಡಿದ್ದಾರೆ. ಕೆಲವೊಮ್ಮೆ ಪಾರ್ಟಿ ನಾಯಕರನ್ನು ಮೀರಿ ಹೇಳಿಕೆ ನೀಡುವುದು ಸಚಿವರಿಗೆ ಅಭ್ಯಾಸವೇ ಆಗಿಬಿಟ್ಟಿದೆ.












