ಅಮೆರಿಕವನ್ನು ಹೆಚ್ಚು ಕಾಲ ಮುಚ್ಚಿಡಲಾಗುವುದಿಲ್ಲ: ಡೊನಾಲ್ಡ್ ಟ್ರಂಪ್

0
1071

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಮಾ. 25: ಕೊರೊನಾ ಭೀತಿ ಇದೆಯೆಂದು ಅಮೆರಿಕವನ್ನು ಹೆಚ್ಚು ಕಾಲ ಮುಚ್ಚಿ ಇಡಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಅಮೆರಿಕದಲ್ಲಿ ಕೊರೊನಕ್ಕೆ 557 ಮಂದಿ ಮೃತಪಟ್ಟ ಪರಿಸ್ಥಿತಿಯಲ್ಲಿ ಟ್ರಂಪ್‍ರಿಂದ ಹೇಳಿಕೆ ಬಂದಿದ್ದು ಸೋಮವಾರ ಅಲ್ಲಿ 100 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ಸಾವು ತಡೆಯಲು ಇಷ್ಟು ನಿಯಂತ್ರಣಗಳನ್ನು ಹೇರುವುದು ಸುಮ್ಮನೆ. ಇದಕ್ಕೆ ಅಮೆರಿಕ ದೊಡ್ಡ ಬೆಲೆ ತೆರಬೇಕಾಗಿದೆ ಎಂದು ವೈಟ್ ಹೌಸ್‍ನಲ್ಲಿ ಪತ್ರಕರ್ತರಿಗೆ ಅವರು ಹೇಳಿದರು. ಕೊರೊನಾ ವೈರಸ್ ಉಂಟುಮಾಡುವ ಸಾವಿನ ದರ ತುಂಬ ಸಣ್ಣದು. ಮೊದಲ ಹಂತದಲ್ಲಿ ಇರುವ ಭಯ ಅನವಶ್ಯಕವಾಗಿದೆ ಎಂದು ಅವರು ಹೇಳಿದರು. ದೇಶದಲ್ಲಿ ನಿಯಂತ್ರಣಗಳಿಗೆ ಸಡಿಲಿಕೆಯನ್ನು ವಿಜ್ಞಾನ ಲೋಕ ಒಪ್ಪುವುದೇ ಎಂದು ಕೇಳಿದಾಗ ನಿಯಂತ್ರಣಗಳಿಂದ ದೇಶ ದೊಡ್ಡ ಬೆಲೆ ತೆರಬೇಕಾಗಿದೆ ಎಂಬುದನ್ನು ಅವರು ಅರಿಯಲಿ ಎಂದು ಟ್ರಂಪ್ ಹೇಳಿದರು.

ಆರ್ಥಿಕ ಪತನ ಕೊರೊನಾ ಮರಣದ ದರಕ್ಕಿಂತ ದೊಡ್ಡದಾದ ಮರಣ ದರಕ್ಕೆ ಕಾರಣವಾಗಬಹುದು ಎಂದು ಎಂದು ಟ್ರಂಪ್ ಹೇಳಿದರು . ಆರ್ಥಿಕ ಮಾಂದ್ಯ ಆತ್ಮಹತ್ಯೆ ದರವನ್ನು ಹೆಚ್ಚಳ ಮಾಡಬಹುದು ಎಂದು ಅವರು ಹೇಳಿದರು. ಅಮೆರಿಕದಲ್ಲಿ ಈವರೆಗೆ ಕೊರೊನಾ ದೃಢಪಟ್ಟವರ ಸಂಖ್ಯೆ 44000 ದಾಟಿದೆ. ಮರಣ ದರದಲ್ಲಿಯೂ ಕ್ರಮಾತೀತವಾಗಿ ಹೆಚ್ಚಳವಾಗಿದೆ. ಕಳೆದ ದಿವಸ ಅತ್ಯಂತ ಹೆಚ್ಚು ಜನರು ಮೃತಪಟ್ಟಿದ್ದು ವರದಿಯಾಗಿದೆ.