ಇದೋ ಕೇರಳ ಮಾದರಿ; ಶಶಿ ತರೂರ್ ಟ್ವೀಟ್ ವೈರಲ್

0
947

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಮಾ. 25: ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷೆ ಖಚಿತ ಪಡಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಪಡಿತರ ವಿತರಣೆಯನ್ನು ಹೇಗೆ ಮಾಡಲಾಗುತ್ತಿದೆ ಎಂಬ ಕುರಿತು ಚಿತ್ರವನ್ನು ಶಶಿ ತರೂರ್ ಟ್ವೀಟ್ ಮಾಡಿದ್ದರು. ಅದೀಗ ವೈರಲ್ ಆಗಿದೆ. ಪರಸ್ಪರ ಅಂಗಡಿಯವ ಮತ್ತು ಬಳಕೆದಾರ ಅಂತರ ಪಾಲಿಸಿದ ಕುರಿತು ಅವರು ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು.

ರಾಜ್ಯದಲ್ಲಿ ಎಲ್ಲ ಬಿಪಿಎಲ್ ಕುಟುಂಬಗಳಿಗೆ ಆಹಾರ ವಿತರಣೆ ಮಾಡುವುದಕ್ಕೆ ಕೇರಳ ಸರಕಾರ ನಿರ್ಧರಿಸಿತ್ತು. 15 ಕಿಲೊ ಅಕ್ಕಿ ಸಹಿತ ಒಂದು ತಿಂಗಳ ಆಹಾರ ವಸ್ತುಗಳು ಅದರಲ್ಲಿರುತ್ತದೆ. ಕ್ವಾರಂಟೈನ್ ಇರುವವರಿಗೆ ಆಹಾರ ವಸ್ತುಗಳನ್ನು ಮನೆಗೆ ತಂದು ಕೊಡಲಾಗುವುದು. ಮಾತ್ರವಲ್ಲ ಇತರ ಕೆಲವು ಆಹಾರ ವಸ್ತುಗಳ ವಿತರಣೆಯನ್ನೂ ನಡೆಸಲಾಗುತ್ತದೆ.