ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಮಾ. 25: ಇಟಲಿಯಲ್ಲಿ 60 ವರ್ಷ ದಾಟಿದ ಕೊರೊನ ಪೀಡಿತರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಸುದ್ದಿ ಇರುವುದರೊಂದಿಗೆ ಅಮೆರಿಕ, ಚೀನದಲ್ಲಿ 90,100 ವರ್ಷದವರೂ ಕೊರೊನಾ ಮುಕ್ತರಾಗುತ್ತಿದ್ದಾರೆ ಎಂಬ ಶುಭ ಸುದ್ದಿ ಬರುತ್ತಿದೆ. ಸಿಯಾಟ್‍ನ ಸೀನಿಯಸ್ ಹೋಮ್ ನ ಕೊರೊನಾ ಇದ್ದ 90 ವರ್ಷದ ಮಹಿಳೆ ತೀವ್ರ ನಿಗಾದಲ್ಲಿದ್ದು ಈಗ ಆಶ್ಚರ್ಯಕರವಾಗಿ ಕೊರೊನಾ ಮುಕ್ತರಾಗಿದ್ದಾರೆ. ಚೀನದ 100 ವರ್ಷದ ವ್ಯಕ್ತಿ ವುಹಾನ್‍ನ ಹುಬಲ್ ಪ್ರಾಂತದ ಆಸ್ಪ್ರೆಯಿಂದ ಚಿಕಿತ್ಸೆ ಪಡೆದು ರೋಗ ಗುಣಮುಖರಾಗಿದ್ದರು. ಚೀನದ ಈ ಅಜ್ಜ 1920ರಲ್ಲಿ ಹುಟ್ಟಿದ್ದರು.
ಸಿನ್‍ಹುವ ವರದಿಯ ಪ್ರಕಾರ ಕೊರೊನಾದಿಂದ ಪಾರಾದ ಅತಿಹೆಚ್ಚು ವಯೋಮಾನದ ವ್ಯಕ್ತಿ ಈ ಅಜ್ಜನಾಗಿದ್ದಾರೆ. ಸಿನ್‍ಹುವ ವರದಿಯ ಪ್ರಕಾರ ಕೊರೊನಾದಿಂದ ಪಾರಾದ ಅತಿಹೆಚ್ಚು ವಯೋಮಾನದ ವ್ಯಕ್ತಿ ಈ ಅಜ್ಜನಾಗಿದ್ದಾರೆ.












