ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ನ .25: ಪ್ರಧಾನಿ ನರೇಂದ್ರ ಮೋದಿ ಕೊರೊನಾ ಕುರಿತು ಗಮನ ಹರಿಸಿದ್ದು ಬುಧವಾರ ಸಚಿವ ಸಂಪುಟದ ಸಭೆಯಲ್ಲಿ ಸಚಿವರು ಮತ್ತು ಪ್ರಧಾನಿ ಒಂದು ಮೀಟರ್ ಅಂತರವನ್ನು ಕಾಯ್ದುಕೊಂಡು ಮುಂಪಕ್ತಿ ಹಾಕಿಕೊಟ್ಟಿದ್ದಾರೆ. ಮಂಗಳವಾರ ಮಧ್ಯರಾತ್ರೆ ಇಡೀ ದೇಶಕ್ಕೆ 21 ದಿನಗಳ ಲಾಕ್ ಡೌನ್ ಘೋಷಿಸಿದ ಬಳಿಕ ಸಚಿವ ಸಂಪುಟದ ಮೊದಲ ಸಭೆ ನಡೆದಿತ್ತು. ಇದರಲ್ಲಿ 1-1 ಮೀಟರ್ ಅಂತರ ಇತ್ತು.
ಮಂಗಳವಾರ ಮೋದಿ ರಾಷ್ಟ್ರದೊಂದಿಗೆ ಮಾತಾಡಿದ್ದು ಅದರಲ್ಲಿ ಸಾಮಾಜಿಕ ಅಂತರದ ಮಾತು ಹೇಳಿದ್ದರು. ಅವರೇ ಇಂದು ಬೆಳಗ್ಗೆ ಇದನ್ನು ಪಾಲನೆ ಮಾಡಿದರು. ಸಾಮಾನ್ಯವಾಗಿ ಸಚಿವ ಸಂಪುಟದವರು ದುಂಡು ಮೇಜಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ಇಂದು ಅವರು ಒಂದೊಂದು ಮೀಟರ್ ದೂರದಲ್ಲಿ ಕುರ್ಚಿಯಲ್ಲಿ ಕುಳಿತರು. ಮೋದಿ , ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ವಿತ್ತ ಸಚಿವೆ ನಿರ್ಮಲಾ , ಆರೋಗ್ಯ ಸಚಿವ ಹರ್ಷವರ್ಧನ, ಸಚಿವ ಪೊಖರಿಯಾಲ್ ನಿಶಂಕ್ ಮುಂತಾದವರಿದ್ದರು.
ಬೈಠಕ್‍ನಲ್ಲಿ ಕೊರೊನಾ ಮತ್ತು ಅದರಿಂದ ಪಾರಾಗುವ ಸಿದ್ಧತೆಯ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಜನರ ಕಷ್ಟ ದೂರ ಮಾಡಲು ಸಲಹೆ ಕೊಟ್ಟಿದ್ದಾರೆ. ಇದೇವೇಳೆ ಆರೋಗ್ಯ ಸಚಿವಾಲಯ ಕೊರೊನಾ ವಿರುದ್ಧ ಮಾಡಿದ ಕೆಲಸಗಳ ಕುರಿತು ಮೋದಿಗೆ ತಿಳಿಸಿತು.












