ಸನ್ಮಾರ್ಗ ವಾರ್ತೆ
ಜನೀವ, ಮಾ. 26: ಕೊರೊನಾ ಎದುರಿಸಲು ಹಲವು ದೇಶಗಳು ಜಾರಿಗೆ ತಂದ ಲಾಕ್ಡೌನ್ ಕ್ರಮ ವೈರಸನ್ನು ನಿರ್ಮೂಲನಗೊಳಿಸಲು ಸಾಕಾಗದು. ಐಸೊಲೇಶನ್ ಅದಕ್ಕೆ ಉತ್ತಮ ಮಾರ್ಗ. ಆದರಿಂದ ಅದಕ್ಕೆ ಆದ್ಯತೆ ನೀಡಬೇಕೆಂದು ವಿಶ್ವ ಆರೋಗ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅದಾನೋಮ ಗೆಬ್ರಿಯೆಸಸ್ ಹೇಳಿದ್ದಾರೆ.
ಕೊರೊನಾ ಹರಡುವುದನ್ನು ಮಂದಗತಿಯಲ್ಲಿಡಲಿಕ್ಕಾಗಿ , ಹಲವು ದೇಶಗಳು ಲಾಕ್ ಡೌನ್ ಮಾಡುತ್ತಿವೆ. ಆದರೆ ಈ ಸಮಯವನ್ನು ವೈರಸ್ ನಾಶಪಡಿಸುವುದಕ್ಕೆ ಉಪಯೋಗಿಸಬೇಕೆಂದು ಎಲ್ಲ ದೇಶಗಳೊಂದಿಗೆ ವಿನಂತಿಸುತ್ತೇನೆ ಎಂದು ಗೆಬ್ರಿಯೋಸ್ ಹೇಳಿದರು.
ಮನೆಯಲ್ಲೇ ಇರಿ, ಜನರ ಸಂಚಾರ ನಿಷೇಧಿಸುವುದೆಲ್ಲ ಆರೋಗ್ಯ ವ್ಯವಸೆಯ ಒತ್ತಡ ಕಡಿಮೆ ಮಾಡುವುದಕ್ಕಾಗಿದೆ. ಆದರೆ ಇದರಿಂದ ಅಂಟುರೋಗ ಶಮನವಾಗುವುದಿಲ್ಲ. ರೋಗ ಪೀಡಿತರನ್ನು ಕಂಡು ಹುಡುಕಿ ಐಸೊಲೇಟ್ ಮಾಡಬೇಕು. ಪರೀಕ್ಷೆ ಮಾಡಿ ಚಿಕಿತ್ಸೆ ಕೊಡಬೇಕು. ರೋಗ ಹರಡದಂತೆ ತಡೆಯುವುದಕ್ಕೆ ಅತೀ ಉತ್ತಮ ದಾರಿ ಇದು ಎಂದು ಅವರು ಹೇಳಿದ್ದಾರೆ.
ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 4 ಲಕ್ಷ ದಾಟಿದೆ. 18,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.












