ಸನ್ಮಾರ್ಗ ವಾರ್ತೆ
ಆ ಆಡಿಯೊ 42 ಸೆಕೆಂಡುಗಳಷ್ಟಿದೆ. ಒಂದು ತುದಿಯಲ್ಲಿ ಜೋರಾಗಿ, ಕಿರುಚುವುದು, ಬೇಡಿಕೊಳ್ಳುವುದು ಇದೆ.
“ಮೊರೆನಾ ತನಕ ನಿಮಗೆ ಲಿಫ್ಟ್ ನೀಡಲು ಯಾರನ್ನಾದರೂ ಕೇಳಿ. ಹಲೋ? ಹಲೋ? ” ಮೌನ. ನಂತರ,
“100 ಕ್ಕೆ ಕರೆ ಮಾಡಿ. ಆಂಬ್ಯುಲೆನ್ಸ್ ಇಲ್ಲವೇ? ಅವರು ನಿಮ್ಮನ್ನು ಬಿಡಲು ಸಾಧ್ಯವಿಲ್ಲವೇ? ಹಲೋ? ” ಇನ್ನೂ ಮೌನ. ನಂತರ,
ಭಾರವಾದ ಉಸಿರಾಟ. ಲಾಕ್ಡೌನ್ನಿಂದ ಮಧ್ಯಪ್ರದೇಶದ ಮನೆಗೆ ತಲುಪುವ ಹತಾಶ ಪ್ರಯತ್ನದಲ್ಲಿದ್ದ ವ್ಯಕ್ತಿ ತನ್ನ ಸಹೋದರನೊಂದಿಗೆ ಸಾಯುವ ಮುನ್ನ ಕೊನೆಯ ಬಾರಿ ಮೊಬೈಲ್ ನಲ್ಲಿ ಆಡಿದ ಸಂಭಾಷಣೆ ಇದು. ದೆಹಲಿಯಿಂದ ನೂರು ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
“ಲೆನೆ ಆ ಸಕ್ತೆ ಹೋ ತೋ ಆ ಜಾವೊ (ನಿಮಗೆ ಸಾಧ್ಯವಾದರೆ ನನ್ನನ್ನು ಕರೆದುಕೊಂಡು ಬನ್ನಿ) ಎಂದು ಆತ ಕೊನೆಯ ಬಾರಿ ಹೇಳುವುದು ದಾಖಲಾಗಿದೆ.
38 ವರ್ಷದ ರಣವೀರ್ ಸಿಂಗ್ ಅವರು ಬಳಲಿಕೆಯಿಂದ ಕುಸಿದು ಹೃದಯಾಘಾತದಿಂದ ಶನಿವಾರ ಆಗ್ರಾದಲ್ಲಿ ಸಾವನ್ನಪ್ಪಿದರು, ಇನ್ನೂ 100 ಕಿ.ಮೀ.ಗಳಷ್ಟು ದೂರ ಕ್ರಮಿಸಿದ್ದರೆ ಅವರು ಮನೆಗೆ ತಲುಪುತ್ತಿದ್ದರು. ದೊಡ್ಡ ನಗರಗಳಿಂದ ತಮ್ಮ ಮನೆಗೆ ತೆರಳುತ್ತಿರುವ ಅಸಂಖ್ಯಾತ ವಲಸೆ ಕಾರ್ಮಿಕರಲ್ಲಿ ರಣವೀರ್ ಒಬ್ಬರು.
ಮಾರ್ಚ್ 22 ರಂದು ಪತ್ನಿ ಮಮತಾ ಅವರು ರಣವೀರ್ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದ್ದು, ಹಿಂದಿರುಗುವಂತೆ ಕೇಳಿಕೊಂಡಿದ್ದರು.
“ನಮ್ಮ ಹಳ್ಳಿಯ ಇತರ ಇಬ್ಬರು ಹುಡುಗರು ದೆಹಲಿಯಿಂದ ಹಿಂದಿರುಗುತ್ತಿದ್ದರು. ಆದ್ರೆ ಪತಿ ಸಾಧ್ಯವಿಲ್ಲ ಎಂದು ಹೇಳಿದರು. ಅವರು ತುಘಲಕಾಬಾದ್ನಲ್ಲಿ ರೆಸ್ಟೋರೆಂಟ್ ನಲ್ಲಿ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿದ್ದರು.
ರಣವೀರ್ ಕಲ್ಕಾಜಿಯ ಡಿಡಿಎ ವಸಾಹತು ಪಕ್ಕದ ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಮನೆಗಾಗಿ ಸಾಲ ಮಾಡಿದ್ದಾರೆ. ಆದರೆ ಶುಕ್ರವಾರ, ಮಧ್ಯಾಹ್ನ 2 ಗಂಟೆಗೆ, ಅವರು ಮನೆಗೆ ಹೊರಟರು. ಸಂಜೆ 5 ಗಂಟೆಗೆ ಪೊಲೀಸರು ತಡೆದರು. ದೂಡಿದರು. ಅದರಿಂದಾಗಿ ಅವರು ದೈಹಿಕ ಸಮಸ್ಯೆಗೆ ಒಳಗಾದರು.
ಅವರ ವಿಷಯವನ್ನು ತಿಳಿದ ಕುಟುಂಬವು ಆಗ್ರಾಕ್ಕೆ ಹೊರಟಿತು. ಆಗ್ರಾದ ಆಸ್ಪತ್ರೆಯಲ್ಲಿ ಅವರ ಶವ ಇತ್ತು ಮತ್ತು ಪೊಲೀಸರು ಇದನ್ನು ಹೃದಯಾಘಾತ ಎಂದು ಕರೆದರು. “ನಾನು ಅವನೊಂದಿಗೆ ಕೊನೆಯದಾಗಿ ಮಾತನಾಡಿದಾಗ, ಅವನು ನೆಲದ ಮೇಲೆ ಮಲಗಿದ್ದಾನೆ ಮತ್ತು ಸಾವಿಗೆ ಹತ್ತಿರವಾಗಿದ್ದಾನೆ ಎಂದು ಅನಿಸಿತ್ತು ಎಂದು ಸಹೋದರ ಅರವಿಂದ್ ಹೇಳಿದರು. ೪೨ ಸೆಕೆಂಡುಗಳ ಕಾಲ ಫೋನಲ್ಲಿ ಮಾತಾಡಿದ್ದು ಇವರೇ.
ರಣವೀರ್ ನ ಕಿರಿಯ ಮಗಳು ಪೋಲಿಯೋ ಪೀಡಿತೆ. ಅವಳಿಗೆ ನಡೆಯಲಾಗದು. ಈಗ ಮೂರು ವರ್ಷ. ಆಸ್ಪತ್ರೆಯಲ್ಲಿ ಶವವಾಗಿ ಮಲಗಿದ್ದ ರಣವೀರ್ ರ ಜೇಬಿನಲ್ಲಿ 800 ರೂಪಾಯಿ ಇತ್ತು.
ಹೀಗೆ ಓರ್ವ ವಲಸೆ ಕಾರ್ಮಿಕನ ಬದುಕು ಮುಗಿದಿದೆ. ಈಗಲೂ ಅಸಂಖ್ಯ ಕಾರ್ಮಿಕರು ಮನೆಗೆ ಹೋಗುತ್ತಿದ್ದಾರೆ. ಕಾಲಲ್ಲಿ ಗುಳ್ಳೆಗಳು ಎದ್ದಿವೆ. ವಾಹನ ಇಲ್ಲ. ತಿನ್ನಲು, ಕುಡಿಯಲು ಏನೂ ಇಲ್ಲ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ












