ಸನ್ಮಾರ್ಗ ವಾರ್ತೆ
ಕತಾರ್‌ನ ರಾಷ್ಟ್ರೀಯ ಡೆಬಿಟ್ ಕಾರ್ಡ್ ಹಿಮ್ಯಾನ್ ಅನ್ನು ಇನ್ನು ಮುಂದೆ ಒಮಾನಿನಲ್ಲೂ ಬಳಸಬಹುದು. ಡಿಜಿಟಲ್ ಪೇ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಜಿಸಿಸಿ ದೇಶಗಳಲ್ಲಿ ಆರ್ಥಿಕ ಸಹಕಾರವನ್ನು ಬಲಪಡಿಸಲು ಕತರ್ ನ ಮೂರನೇ ಹಣಕಾಸು ವಲಯದ ಕಾರ್ಯತಂತ್ರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಹೀ ಮ್ಯಾನ್ ಕಾರ್ಡು ಹೊಂದಿರುವವರು ಒಮಾನಿನಲ್ಲಿರುವ ಅಧಿಕೃತ ಮಳಿಗೆಗಳು ಮತ್ತು ಎಟಿಎಂಗಳಲ್ಲಿ ಪರ್ಚೇಸ್ ಮಾಡಲು ಮತ್ತು ಹಣವನ್ನು ಹಿಂಪಡೆಯಲು ಹೀಮ್ಯಾನ್ ಕಾರ್ಡನ್ನು ಬಳಸಬಹುದು.
ಹಿಮ್ಯಾನ್ ಕಾರ್ಡ್ ಪ್ರಸ್ತುತ ಸೌದಿ ಅರೇಬಿಯಾ ಬಹರೇನ್ ಮತ್ತು ಕುವೈಟ್‌ನಲ್ಲಿ ಲಭ್ಯವಿದೆ. ಈ ಸೇವೆಯನ್ನು ಇದೀಗ ಒಮಾನಿಗೂ ವಿಸ್ತರಿಸಲಾಗಿದ್ದು ಜಿಸಿಸಿ ದೇಶಗಳ ನಡುವೆ ಪ್ರಯಾಣಿಸುವಾಗ ಕಾರ್ಡ್ ದಾರರಿಗೆ ಹೆಚ್ಚು ಅನುಕೂಲಕರ ಮತ್ತು ಸುರಕ್ಷಿತ ಪೆ ಆಯ್ಕೆಗಳನ್ನು ಇದು ಒದಗಿಸುತ್ತದೆ.












