ಕೇರಳದಲ್ಲಿ ಲಾಕ್ ಡೌನ್ ಸಡಿಲಿಕೆಗೆ ತೀರ್ಮಾನ: ಕಾಸರಗೋಡು, ಕಣ್ಣೂರ್, ಕೋಝಿಕ್ಕೋಡ್, ಮಲಪ್ಪುರಂ ಜಿಲ್ಲೆಗಳು ರೆಡ್ ಝೋನ್

0
657

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಎ.16: ರೋಗ ವ್ಯಾಪಿಸುವ ಪ್ರಮಾಣ ಅನುಸಾರ ಕೇರಳದ ಜಿಲ್ಲೆಗಳನ್ನು ಮೂರು ವಲಯದಲ್ಲಿ ಹಂಚಿಕೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ.

ಕಾಸರಗೋಡು, ಕಣ್ಣೂರ್, ಕೋಝಿಕ್ಕೋಡ್, ಮಲಪ್ಪುರಂ ಜಿಲ್ಲೆಗಳು ರೆಡ್‍ಝೋನ್ ಎಂದು ನಿರ್ಧರಿಸಲಾಗಿದ್ದು ವಯನಾಡ್, ಕೋಟ್ಟಯಂ ಗ್ರೀನ್ ಝೋನ್ ಆಗಲಿದೆ. ಉಳಿದ ಜಿಲ್ಲೆಗಳನ್ನು ಆರೆಂಜ್ ಝೋನ್ ಆಗಿ ಪರಿವರ್ತಿಸಲು ಕೇಂದ್ರ ಸರಕಾರವನ್ನು ವಿನಂತಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎಪ್ರಿಲ್ 20ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉರಿಹಗ್ಗ, ಗೇರುಬೀಜ, ಗೋಡಂಭಿ , ಬೀಡಿ ಈ ಕ್ಷೇತ್ರದಲ್ಲಿ ಸಡಿಲಿಕೆಯಾಗಲಿದೆ ಸಾರ್ವಜನಿಕ ಸಂಚಾರ ಸ್ಥಗಿತ ಮೇ 3ರರವರೆಗೆ ಮುಂದುವರಿಯಲಿದೆ. ಥಿಯೇಟರ್, ಶಾಪಿಂಗ್ ಮಾಲ್, ಆರಾಧಾನಾಲಯಗಳು, ಮದುವೆ ಸಮಾರಂಭಗಳು, ಬಾರ್ ಬಿವರೇಜ್ ಗೆ ಈಗಿನ ನಿಯಂತ್ರಣ ಮೇ ಮೂರರವರೆಗೆ ಮುಂದುವರಿಯಲಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.