ಅನಿವಾಸಿಗಳ ವಿರುದ್ಧ ವಿದ್ವೇಷ ಪ್ರಚಾರ: ಯುಎಇ ಪತ್ರಕರ್ತನ ಬಂಧನ

0
873

ಸನ್ಮಾರ್ಗ ವಾರ್ತೆ

ದುಬೈ, ಎ.16: ಏಷ್ಯದೇಶದಿಂದ ಬಂದ ಅನಿವಾಸಿ ಕಾರ್ಮಿಕರನ್ನು ಅಪಮಾನಿಸುವ ರೀತಿಯಲ್ಲಿ ಅಪಪ್ರಚಾರಕ್ಕಿಳಿದು ದ್ವೇಷವನ್ನು ಹರಡಿದ ಯುಎಇಯ ನಾಗರಿಕನಾದ ಪತ್ರಕರ್ತನನ್ನು ಬಂಧಿಸಲಾಗಿದೆ. ತಾರಿಕ್ ಅಲ್ ಮೆಹ್ರ್ ಯಾಸಾ ಬಂಧಕ್ಕೊಳಗಾದ ವ್ಯಕ್ತಿ. ಈತ ಕವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯನಾಗಿರುವ ವ್ಯಕ್ತಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಭಾರತೀಯರು, ಬಾಂಗ್ಲಾಪ್ರದೇಶ ಸಹಿತ ಹೊರನಾಡಿನಿಂದ ಅರಬ್‍ ರಾಷ್ಟ್ರಕ್ಕೆ ಬಂದು ದುಡಿಯುವವರ ವಿರುದ್ಧ ಈತ ನೀಡಿದ ಹೇಳಿಕೆ ಕಾನೂನು ವಿರೋಧಿ ಎಂದು ಹೇಳಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಅವನನ್ನು ಬಂಧಿಸಲು ಆದೇಶ ಹೊರಡಿಸಿದ್ದರು. ಒಂದು ಸಮುದಾಯದ ಭಾವನೆಗೆ ನೋವಾಗುವಂತೆ ಈತ ಪೋಸ್ಟ್ ಹಾಕಿದ್ದ. ಯುಎಇಯಲ್ಲಿ ಸಹಿಷ್ಣುತೆಯನ್ನು ಎತ್ತಿಹಿಡಿಯಲಾಗುತ್ತಿದೆ. ಈ ಮೌಲ್ಯದ ವಿರುದ್ಧ ಈತ ಹೇಳಿಕೆ ನೀಡಿದ್ದಾನೆ ಎಂದು ಯುಎಇಯ ಅಧಿಕೃತ ಸುದ್ದಿ ಸಂಸ್ಥೆ ಬೆಟ್ಟು ಮಾಡಿದೆ. ದೇಶ, ವಿಶ್ವಾಸ, ಬಣ್ಣ, ಭಾಷೆಯ ಹೆಸರಿನಲ್ಲಿ ಒಡಕು ಮೂಡಿಸಲು ಯುಎಇಯಲ್ಲಿ ಅನುಮತಿಯಿಲ್ಲ. ಇಂತಹ ವಿಷಯಗಳನ್ನು ಬಲವಾಗಿ ದೇಶ ವಿರೋಧಿಸುತ್ತಿದೆ. ಎಲ್ಲರಿಗೂ ಗೌರವ ನೀಡುವುದು ಯುಎಇಯ ಮೂಲ ತತ್ವವಾಗಿದೆ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಯುಎಇ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಅನಿವಾಸಿಗಳನ್ನುಗಡೀಪಾರುಗೊಳಿಸಬೇಕೆಂದು ಕುವೈಟ್‍ನ ನಟಿಯೊಬ್ಬಳು ಹೇಳಿಕೆ ನೀಡಿದ್ದು ಕೂಡ ವಿವಾದವಾಗಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.