ಸನ್ಮಾರ್ಗ ವಾರ್ತೆ
ಮುಂಬೈ, ಎ.16: ಕೊರೊನಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂಬೈಯಲ್ಲಿ ಮುಂದುವರಿದಿದ್ದರೂ ಅಲ್ಲಿನ ಪ್ರಮುಖ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗ ಇಲ್ಲ ಎಂದು ವರದಿ ತಿಳಿಸಿದೆ. ಚಿಕಿತ್ಸಾ ರಂಗದ ಲೋಪಗಳಿಂದ ನಗರದಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಪ್ರಮುಖ ಆಸ್ಪತ್ರೆಗಳಲ್ಲಿ ಐಸಿಯು, ತಜ್ಞ ವೈದ್ಯರ ಕೊರತೆ ಇದೆ. 113 ಮಂದಿ ನಗರದಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ಶೇ. 87ರಷ್ಟು, ಮಂದಿ ಹೃದಯ, ಮಧುಮೇಹ, ಕರುಳು, ಕಿಡ್ನಿ, ತೀವ್ರ ರಕ್ತದೊತ್ತಡ ರೋಗಿಗಳಾಗಿದ್ದಾರೆ.
ಕೊರೊನ ನಿರ್ವಹಿಸುತ್ತಿರುವ ಕಸ್ತೂರ್ ಬಾ, ರಾಜೆವಾಡಿ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗವಿಲ್ಲ. ಸ್ಟಾರ್ ಆಸ್ಪತ್ರೆ ಸೆವೆನ್ ಹಿಲ್ಸ್ ಅನ್ನು ಕೊರೊನಾ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇಲ್ಲಿ ಎಂಟು ಮಂದಿಯನ್ನು ಮಾತ್ರ ಐಸಿಯುನಲ್ಲಿಟ್ಟುಕೊಳ್ಳಬಹುದಾಗಿದೆ. ಜಸ್ಲಾಕ್, ಹಿಂದುಜಾ, ಸೈಫಿ ಸಹಿತ 15 ಪ್ರಮುಖ ಆಸ್ಪತ್ರೆಗಳ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ನಂತರ ಆಸ್ಪತ್ರೆ ಮುಚ್ಚಲಾಗಿದೆ. ಇದು ತೀವ್ರ ಪ್ರತಿಕೂಲವಾಗಿ ಪರಿಣಮಿಸಿದೆ. 500 ಮಂದಿಯ ತೀವ್ರ ನಿಗಾ ವಿಭಾಗ ಅಗತ್ಯವಿದೆ ಎಂಬ ಬೇಡಿಕೆ ಕೇಳಿಬಂದಿದೆ.
ಮಂಗಳವಾರ, ಬುಧವಾರಗಳಲ್ಲಿ ಧಾರಾವಿಯಲ್ಲಿ ಕೊರೊನಾ ಬಾಧೆಯಿಂದ ಇಬ್ಬರು ಮೃತಪಟ್ಟಿದ್ದಾರೆ. 11 ಮಂದಿಯಲ್ಲಿ ಹೊಸದಾಗಿ ರೋಗ ಕಂಡು ಬಂದಿದೆ. ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವರ್ಧರಿಗೆ ಮತ್ತು ಸುರಕ್ಷಾ ಅಧಿಕಾರಿಗಳಿಗೆ ಮತ್ತು ಅಡಿಗೆಯಾಳಿಗೆ ಸಹಿತ ಹದಿನಾಲ್ಕು ಮಂದಿಗೆ ಕೊರೊನಾ ತಗಲಿದೆ. ಮುಂಬೈಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಕೊರೊನಾದಿಂದ ಬಳಲುತ್ತಿದ್ದಾರೆ. ಎರಡು ದಿವಸಗಳಲ್ಲಿ ಮಹಾರಾಷ್ಟ್ರದಲ್ಲಿ 532 ಮಂದಿಗೆ ರೋಗ ಅಂಟಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












