ಕೊರೊನಾ: ಅಲ್ ಅಕ್ಸಾ ಮಸೀದಿ ರಮಝಾನ್‍ನಲ್ಲಿ ಬಂದ್: ಇತಿಹಾಸದಲ್ಲೇ ಮೊದಲು

0
1048

ಸನ್ಮಾರ್ಗ ವಾರ್ತೆ

ಪೂರ್ವ ಜೆರುಸಲೇಂ, ಎ.17: ಮುಸ್ಲಿಮರ ಆರಾಧಾನಾಲಯವಾದ ಪೂರ್ವ ಜೆರಸಲೇಮಿನ ಅಲ್ ಅಕ್ಸಾ ಮಸೀದಿಯನ್ನು ರಮಝಾನಿನಲ್ಲಿ ಮುಚ್ಚಿಡಲಾಗುವುದು. ಕೊರೊನಾ ವೈರಸ್ ಬಾಧೆಯ ಹಿನ್ನೆಲೆಯಲ್ಲಿ ಮಸೀದಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ. ಇದನ್ನು ಜೋರ್ಡಾನ್ ನಿಯೋಜಿಸಿದ ಜೆರುಸಲೆಂ ಇಸ್ಲಾಮಿಕ್ ವಕ್ಫ್ ಸಮಿತಿ ತೀರ್ಮಾನಿಸಿದೆ.

ಅಲ್‍ಅಕ್ಸಾ ಮಸೀದಿಯನ್ನು ರಮಝಾನ್‍ನಲ್ಲಿ ಮುಚ್ಚುವುದು ಇತಿಹಾದಲ್ಲೇ ಇದು ಮೊದಲು. ರಮಝಾನ್‍ನಲ್ಲಿ ಅಲ್‍ಅಕ್ಸದಲ್ಲಿ ಪ್ರಾರ್ಥನೆ ಬೇಡ ಎಂದು ಫತ್ವ ಮತ್ತು ಆರೋಗ್ಯ ತಜ್ಞರ ಸಲಹೆಯಂತೆ ಕ್ರಮ ಕೈಗೊಳ್ಳಲಾಗಿದೆ. ಸುರಕ್ಷಿತತೆಯ ದೃಷ್ಟಿಯಲ್ಲಿ ಮುಸ್ಲಿಮರು ರಮಝಾನ್‍ನಲ್ಲಿ ಮನೆಯಲ್ಲಿದ್ದು ನಮಾಝ್ ನಿರ್ವಹಿಸಬೇಕೆಂದು ಇಸ್ಲಾಮಿಕ್ ವಕ್ಫ್ ಸಮಿತಿ ಕರೆ ನೀಡಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.