ಜಗತ್ತಿನುದ್ದಕ್ಕೂ ಕೊರೊನಾ ಹರಡುವುದು ನಿಂತಿಲ್ಲ: ಸಾವಿನ ಸಂಖ್ಯೆ 1, 45,466

0
557

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ. 17: ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿದ್ದರೂ ವಿಶ್ವಾದ್ಯಂತ ವೈರಸ್ ತ್ವರಿತಗತಿಯಲ್ಲಿ ಹರಡುವುದು ಮುಂದುವರಿದಿದೆ. 21,81,131 ಮಂದಿಗೆ ಈವರೆಗೆ ಕೊರೊನಾ ದೃಢಪಟ್ಟಿದೆ. 1,45,466 ಮಂದಿ ಮೃತಪಟ್ಟಿದ್ದಾರೆ. 56,602 ಮಂದಿ ಗಂಭೀರ ಅಥವಾ ತೀವ್ರ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. 5,47,014 ಮಂದಿ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ವೈರಸ್‍ನಿಂದ 34,617 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ 6,77,570 ಮಂದಿಗೆ ರೋಗ ದೃಢಪಟ್ಟಿದೆ. 57,508 ಮಂದಿ ರೋಗ ಮುಕ್ತರಾಗಿದ್ದಾರೆ. 13,369 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ಪೇನ್‍ನಲ್ಲಿ 1,84,948 ಮಂದಿಗೆ ರೋಗ ಇದೆ. ಇಟಲಿಯಲ್ಲಿ 1,68,941 ಮಂದಿಗೆ, ಫ್ರಾನ್ಸ್ ನಲ್ಲಿ 16,027, ಜರ್ಮನಿಯಲ್ಲಿ 137,698, ಇಂಗ್ಲೆಂಡಿನಲ್ಲಿ 103093, ಚೀನದಲ್ಲಿ 82,341, ಇರಾನ್‍ನಲ್ಲಿ 77,995 ಮಂದಿಯಲ್ಲಿ ರೋಗ ದೃಢಪಟ್ಟಿದೆ.

ಸ್ಪೈನ್‍ನಲ್ಲಿ 19,315, ಇಟಲಿಯಲ್ಲಿ 22,170, ಫ್ರಾನ್ಸ್ ನಲ್ಲಿ 17,920, ಜರ್ಮನಿಯಲ್ಲಿ 4,052, ಇಂಗ್ಲೆಂಡಿನಲ್ಲಿ 13,729, ಚೀನ-3,342, ಇರಾನ್ 4869 ಮಂದಿ ಮೃತಪಟ್ಟಿದ್ದಾರೆ. ಆಫ್ರಿಕದಲ್ಲಿ 1,265 ಮಂದಿಗೆ ವೈರಸ್ ತಗಲಿದೆ. 873 ಮಂದಿ ಮೃತಪಟ್ಟಿದ್ದಾರೆ. 3,235 ಮಂದಿ ರೋಗಮುಕ್ತರಾಗಿದ್ದಾರೆ. ಅಲ್ಜೀರಿಯದಲ್ಲಿ 2,070, ಈಜಿಪ್ಟ್ ನಲ್ಲಿ 2,350, ಮೊರೊಕ್ಕೊದಲ್ಲಿ 1,888, ದಕ್ಷಿಣ ಆಫ್ರಿಕದಲ್ಲಿ 2, 415 ಮಂದಿಗೆ ಕೊರೊನಾ ಬಾಧಿಸಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.