ಮಾಸ್ಕ್ ಧರಿಸದ್ದಕ್ಕೆ ಭಿನ್ನ ಸಾಮರ್ಥ್ಯದ ಮಗನನ್ನೇ ಕೊಂದ ತಂದೆ

0
615

ಸನ್ಮಾರ್ಗ ವಾರ್ತೆ

ಕೊಲ್ಕತಾ, ಎ.19: ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸಿಲ್ಲ ಎಂದು ನಡೆದ ಮಾತಿನ ಚಕಮಕಿಯಲ್ಲಿ ಭಿನ್ನ ಸಾಮರ್ಥ್ಯದ ಮಗನನ್ನು ತಂದೆ ಕೊಲೆ ಮಾಡಿದ ಘಟನೆ ಕೊಲ್ಕತಾದಲ್ಲಿ ಶನಿವಾರ ಸಂಜೆ ಘಟಿಸಿದೆ. ಉತ್ತರ ಕೊಲ್ಕತಾದಲ್ಲಿ ಶನಿವಾರ ಸಂಜೆ 78 ವರ್ಷದ ತಂದೆ ಬನ್ಶಿಧರ್ ಮಲ್ಲಿಕ್ ಪುತ್ರ ಸಿರ್ಸೇಂದು ಮಲ್ಲಿಕ್(45)ನನ್ನು ಬಟ್ಟೆ ಉಪಯೋಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಮಗ ಸತ್ತ ಮೇಲೆ ಸಂಜೆ ಏಳು ಗಂಟೆಗೆ ಬನ್ಶಿಧರ್ ಸ್ವಯಂ ಶ್ಯಾಂಪುಕುರ್ ಪೊಲೀಸ್ ಠಾಣೆಗೆ ಹೋಗಿ ಶರಣಾದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.