ಸನ್ಮಾರ್ಗ ವಾರ್ತೆ
ರಾಯ್ಸನ್, ಎ.19: ಮದ್ಯದ ಬಾಟ್ಲಿ ಹಿಡಿದು ಪೋಸುಕೊಟ್ಟ ಮಧ್ಯಪ್ರದೇಶದ ಮೂವರು ಸರಕಾರಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರೆವೆನ್ಯೂ ಇಲಾಖೆಯ ಅಧಿಕಾರಿಗಳಾದ ಅಜಯ್ ದಕಡ್, ದರ್ಮೇಂದ್ರ ಮೆಹ್ರಾ, ಧಯಾರಾಂ ವರ್ಮರನ್ನು ಸರಕಾರ ಅಮಾನತಿನಲ್ಲಿಟ್ಟಿದೆ.
ರಾಯ್ಸನ್ ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವರ ನಿರ್ದೇಶದಂತೆ ಬರೇಲ್ವಿ ಎಸ್ಡಿಎಂ ಬಜೇಂದ್ರ ಸಿಂಗ್ ರಾವತ್ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಸರಕಾರಿ ಅಧಿಕಾರಿಗಳು ಮದ್ಯದ ಬಾಟ್ಲಿ ಎತ್ತಿ ಹಿಡಿದು ನಿಂತ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












