ಸನ್ಮಾರ್ಗ ವಾರ್ತೆ
ಮುಂಬೈ, ಎ. 21: ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲರ್ ಗಳು ಉಗುಳು ತಾಗಿಸಿ ಚೆಂಡು ಸ್ವಿಂಗ್ ಮಾಡುವುದು ಒಂದು ಅಭ್ಯಾಸವಾಗಿದೆ. ಅದರೆ ಇನ್ನು ಹಾಗೆ ಮಾಡುವಂತಿಲ್ಲ. ಇದಕ್ಕೆ ಕೊರೊನಾ ಕಾಲದಲ್ಲಿ ಬೀಗ ಮುದ್ರೆ ಬಿದ್ದಿದೆ. ವೈರಸ್ ಭೀತಿ ಬಹಳ ಬೇಗನೆ ದೂರವಾಗದು ಎಂದು ಖಚಿತವಾಗಿದ್ದರಿಂದ ಇನ್ನು ಕ್ರಿಕೆಟ್ ಆರಂಭವಾದರೂ ಚೆಂಡೆಸೆಯುವ ವೇಳೆ ಉಗುಳು ತಾಗಿಸುವಂತಿಲ್ಲ. 2018ರಲ್ಲಿ ಚೆಂಡು ತಿರುಚಿದ್ದು ವಿವಾದಗೊಂಡ ಮೇಲೆ ಚೆಂಡಿನ ಮೇಲೆ ಕ್ಯಾಮರಾ ಕಣ್ಣುಗಳು ನೆಟ್ಟಿವೆ. ಆದರೆ ಉಗುಳು ತಾಗಿಸುವುದಕ್ಕೆ ಅನುಮತಿ ಕೊಡಲಾಗಿತ್ತು.
ಆಟದ ಮಧ್ಯೆ ಇನ್ನು ಬೆವರಿನಿಂದ ಮಾತ್ರ ಚೆಂಡು ಉಜ್ಜಲು ಅನುಮತಿ ಇರಲಿದೆ ಎಂದು ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ. ಇದು ಬೌಲರ್ ಗಳಿಗೆ ಅಗ್ನಿ ಪರೀಕ್ಷೆಯಾಗಿದೆ. ಕಳೆದ ತಿಂಗಳು ದಕ್ಷಿಣಾಫ್ರಿಕ ವಿರುದ್ಧ ಸರಣಿ ಆರಂಭವಾಗಬೇಕಿತ್ತು. ಭುವನೇಶ್ವರ್ ಕುಮಾರ್ ಕ್ರಿಕೆಟ್ ಆಡುವುದನ್ನು ಬೆಂಬಲಿಸಿದ್ದರು. ಆದರೆ ವೈರಸ್ ಬಾಧೆಯ ಹಿನ್ನೆಲೆಯಲ್ಲಿ ಕ್ರಿಕೆಟ್ ಸರಣಿ ರದ್ದಾಗಿತ್ತು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












