ಫೇಸ್‍ಬುಕ್‍ ನಿಂದ ರಿಲಯನ್ಸ್ ಜಿಯೊದ 9.999 ಶೇರು ಖರೀದಿ, 43,574 ಕೋಟಿ ರೂ. ವಹಿವಾಟು

0
557

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 23: ಟೆಲಿಕಾಂ ಕ್ಷೇತ್ರದ ಬೃಹತ್ ಕುಳ ರಿಲಯನ್ಸ್ ಜಿಯೊದ ಶೇ. 9.999 ಶೇರನ್ನು ಫೇಸ್ ಬುಕ್ ಖರೀದಿಸಿದೆ. 5.7 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ (43,574 ಕೋ.ರೂ.) ಇದಾಗಿದ್ದು ಫೇಸ್‍ಬುಕ್ ವ್ಯವಹಾರೊಂದಿಗೆ ಜಿಯೊದ ಮೌಲ್ಯ 4.62 ಕೋಟಿಯಾಗಿದೆ. ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ನೇರ ಹೂಡಿಕೆ ಇದೆಂದು ರಿಲಯನ್ಸ್ ಹೇಳಿಕೊಂಡಿದೆ.

ಭಾರತ ಚೀನದ ಬಳಿಕ ಎರಡನೆ ಅತೀ ದೊಡ್ಡ ಇಂಟರ್ ನೆಟ್ ಮಾರುಕಟ್ಟೆಯಾಗಿದ್ದು ಜಿಯೊ ಖರೀದಿ ಮೂಲಕ ಭಾರತದಲ್ಲಿ ಫೇಸ್‍ ಬುಕ್‍ ಗೆ ವ್ಯವಹಾರ ಬಲಪಡಿಸಲು ಸಾಧ್ಯವಾಗಲಿದೆ. ಆದ್ದರಿಂದ ಫೇಸ್‍ಬುಕ್ ಮತ್ತು ಜಿಯೊಕ್ಕೆ ಈ ವ್ಯವಹಾರ ಹೆಚ್ಚು ಪ್ರಯೋಜನಕಾರಿಯಾಗಿದೆ. ಭಾರತದಲ್ಲಿ 400 ಮಿಲಿಯನ್ ಡಾಲರ್ ವಾಟ್ಸಪ್ ಬಳಕೆದಾರರು ಫೇಸ್‍ಬುಕ್‍ ಗಿದ್ದಾರೆ. ವಾಟ್ಸಪ್ ಆನ್ ಲೈನ್ ಪೇಮೆಂಟ್ ವ್ಯವಸ್ಥೆ ಆರಂಭಿಸಲಿದೆ ಎಂಬ ಸುದ್ದಿಯ ನಡುವೆ ಜಿಯೊದೊಂದಿಗೆ ಆರ್ಥಿಕ ವ್ಯವಹಾರ ನಡೆದಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.