ಸನ್ಮಾರ್ಗ ವಾರ್ತೆ
ಎಡವಣ್ಣ,ಎ. 24: ವಯೋವೃದ್ಧೆ ತಾಯಿ ಮತ್ತು ಅವರ ಮಗಳು ರಮಝಾನ್ ಮೊದಲ ದಿನ ಕೆಲವು ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾರೆ. ಪತ್ತಪ್ಪಿರಿಯಂ ದಿವಂಗತ ಅರಞಕಲ್ ಅಲವಿ ಎಂಬವರ ಪತ್ನಿ ಪುಲತ್ ಆಸ್ಯ (90), ಇವರ ಪುತ್ರಿ ಎಡವಣ್ಣ ಮುಂಡಂಙರ ಕಲ್ಲಿಂಗ್ ಅಬ್ದುರ ಪತ್ನಿ ಖದೀಜ (65) ಮೃತಪಟ್ಟಿರುವ ಇನ್ನೊಬ್ಬರು. ಆಸ್ಯ ವಯೋ ಸಹಜ ಕಾರಣದಿಂದ ಮತ್ತು ಖದೀಜ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಒಂದೇ ದಿನ ತಾಯಿ ಮಗಳ ನಿಧನ ವಿಶೇಷವಾಗಿದೆ.
ಆಸ್ಯರ ಮೃತದೇಹವನ್ನು ಪತ್ತಪ್ಪಿರಿಯಂ ಪೆರುಲ್ ಕುಂಡ್ ಜುಮಾ ಮಸೀದಿಯಲ್ಲಿ, ಖದೀಜಾರ ಮೃತದೇಹವನ್ನು ಮುಂಡಾಂಙರ ಜುಮಾ ಮಸೀದಿಯಲ್ಲಿ ಸರಳ ರೀತಿಯಲ್ಲಿ ದಫನ ಮಾಡಲಾಯಿತು. ಕೆಲವು ದಿವಸ ಮೊದಲು ಆಸ್ಯರ ಪುತ್ರ ಉಬೈದುಲ್ಲ ಪಕ್ಷಾಘಾತದಿಂದ ಮೃತಪಟ್ಟಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












