ಸ್ವಾವಲಂಬನೆ: ಕೊರೊನಾದ ದೊಡ್ಡ ಪಾಠ- ಮೋದಿ

0
620

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 24: ಸ್ವಾವಲಂಬನೆಯು ಕೊರೊನಾ ಹೇಳಿಕೊಟ್ಟ ಪಾಠವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯಾರನ್ನೂ ಆಶ್ರಯಿಸದೆ ದಿನನಿತ್ಯದ ಅಗತ್ಯವನ್ನು ಮಾಡಿಕೊಳ್ಳಲು ನಾವು ಸಮರ್ಥರಾದೆವು ಎಂದು ಗ್ರಾಮ ಮುಖ್ಯಸ್ಥರೊಂದಿಗಿನ ವೀಡಿಯೊ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಹೇಳಿದರು. ಕೊರೊನಾ ದೊಡ್ಡ ಸವಾಲು. ನಾವು ಅದರಿಂದ ಪಾಠ ಕಲಿಯಬೇಕು. ಕೊರೊನಾದಿಂದ ಬಿಡುಗಡೆಗೊಳ್ಳಲು ನಾವು ಬೇರೆ ಯಾರನ್ನೂ ಆಶ್ರಯಿಸುವ ಅಗತ್ಯವೂ ಇಲ್ಲ. ನಗರಗಳು ಗ್ರಾಮಗಳನ್ನು ಮಾದರಿಯಾಗಿ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಕಳೆದವಾರ ಗ್ರಾಮ ಅಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೊಮರ್ ಅವರು ಪ್ರಧಾನಿಗೆ ಪತ್ರ ಬರೆದು ಗ್ರಾಮಗಳು ಕೊರೊನಾ ಪ್ರತಿರೋಧದಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದರು. ಅವರನ್ನು ದಿಟ್ಟ ಹೋರಾಟಗಾರರು ಎಂದು ಪ್ರಧಾನಿ ವಿಶ್ಲೇಷಿಸಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.