ವಿಶ್ವದಲ್ಲಿ ಕೊರೊನಾ ಪೀಡಿತರು 27,25,000: ಎರಡು ಲಕ್ಷ ಸಮೀಪಿಸಿದ ಸಾವು

0
486

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ. 24: ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 27,25,920 ಆಗಿದೆ. 1,91,061 ಮಂದಿ ಈ ವರೆಗೆ ಕೊರೊನಾದಿಂದ ಮೃತಪಟ್ಟಿದ್ದಾರೆ. ನಿನ್ನೆ 6300 ಮಂದಿ ರೋಗದಿಂದ ಮೃತಪಟ್ಟಿದ್ದಾರೆ. 7,45,905 ಮಂದಿ ಗುಣಮುಖರಾಗಿದ್ದಾರೆ. 78,89,954 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಮೆರಿಕ ದಲ್ಲಿ 8,86,709 ಮಂದಿಗೆ ವೈರಸ್ ದೃಢಪಟ್ಟಿದೆ. ಹೊಸದಾಗಿ 267 ಮಂದಿಗೆ ಕೊರೊನಾ ದೃಢಪಟ್ಟಿದೆ. ಇಲ್ಲಿ 50 ಸಾವಿರದಷ್ಟು ಜನರು ಮೃತಪಟ್ಟಿದ್ದಾರೆ. 85,922 ಮಂದಿ ಅಮೆರಿಕದಲ್ಲಿ ರೋಗ ಮುಕ್ತರಾಗಿದ್ದಾರೆ. 7,50,544 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯೂಯಾರ್ಕ್‍ನಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತರು. ಇಲ್ಲಿ 2,68,581 ಮಂದಿಗೆ ರೋಗ ದೃಢಪಟ್ಟಿದೆ. 20,861 ಮಂದಿ ಮೃತಪಟ್ಟಿದ್ದಾರೆ. 2,18,127 ಮಂದಿ ಚಿಕಿತ್ಸೆಯಲ್ಲಿದ್ದಾರೆ. ನ್ಯೂ ಜರ್ಸಿಯಲ್ಲಿ 1,00,025 ಮಂದಿ, ಮ್ಯಾಸಚುಸೈಟ್ಸ್ ನಲ್ಲಿ 46,023 ಮಂದಿಗೆ ಇದುವರೆಗೆ ರೋಗ ದೃಢೀಕರಣಗೊಂಡಿದೆ.

ಭಾರತದಲ್ಲಿ 1,23,077 ಮಂದಿಗೆ ಕೊರೋನಾ ಇದೆ. 4749 ಮಂದಿಗೆ ರೋಗ ಗುಣವಾಗಿದೆ. ಈಗ 17,610 ಮಂದಿ ಚಿಕಿತ್ಸೆಯಲ್ಲಿದ್ದಾರೆ. 718 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1684 ಮಂದಿಗೆ ಕೊರೊನಾ ದೃಢಪಟ್ಟಿದೆ. 37 ಮಂದಿ ಮೃತಪಟ್ಟಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.