ಸನ್ಮಾರ್ಗ ವಾರ್ತೆ
ಢಾಕ, ಎ. 24: ಬಾಂಗ್ಲಾ ದೇಶದಲ್ಲಿ ಕೊರೊನಾ ವ್ಯಾಪಿಸದಂತೆ ತಡೆಯಲು ತೀವ್ರ ಪ್ರಯತ್ನ ನಿರತ 251 ಮಂದಿ ವೈದ್ಯರಿಗೆ ಕೊರೊನಾ ಬಾಧಿಸಿದೆ ಎಂದು ಬಾಂಗ್ಲಾದೇಶ ವೈದ್ಯ ಫೌಂಡೇಶನ್ ತಿಳಿಸಿದೆ. ರಾಜಧಾನಿ ಢಾಕದಲ್ಲಿ 200 ವೈದ್ಯರಿಗೆ ವೈರಸ್ ದೃಢಪಟ್ಟಿದೆ. ಸ್ವಯಂ ಪ್ರತಿರೋಧ ಉಪಕರಣದ (ಪಿಪಿಇ ಕಿಟ್) ಕೊರತೆಯು ವೈರಸ್ ಬಾಧೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ರೋಗಿಗಳನ್ನು ಉಪಚರಿಸುತ್ತಿರುವ ಶೇ. 25ರಷ್ಟು ವೈದ್ಯರಿಗೆ, ಶೇ. 60ರಷ್ಟು ನರ್ಸ್ , ಮೆಡಿಕಲ್ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಇಲ್ಲಿ ಲಭ್ಯವಿಲ್ಲ ಎಂದು ವರದಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ 3,773 ಮಂದಿಗೆ ಕೊರೊನಾ ದೃಢವಾಗಿದೆ. 120 ಮಂದಿ ಮೃತಪಟ್ಟಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












