ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಎ. 25: ಕೊರೊನಾ ರೋಗಿಯ ದೇಹಕ್ಕೆ ಅಣುನಾಶಕವಾದ ಆಲ್ಟ್ರವಯಲೆಟ್ ಕಿರಣಗಳು ಹಾಯಿಸಿ ಮತ್ತು ಅಣುನಾಶಿನಿ ಚುಚ್ಚುಮದ್ದು ನೀಡಿ ವೈರಸ್ ಅನ್ನು ನಿವಾರಿಸಬಹುದೇ ಎಂದು ತಾನು ನೀಡಿದ ಹೇಳಿಕೆ ತಮಾಷೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಏನು ಪ್ರತಿಕ್ರಿಯೆ ಬರುತ್ತದೆ ಎಂದು ನೋಡಲು ತಮಾಶೆಯಲ್ಲಿ ಆ ಮಾತನ್ನು ಹೇಳಿದ್ದೆ ಎಂದು ನಂತರ ಅವರು ಪತ್ರಕರ್ತರೊಂದಿಗೆ ಹೇಳಿದ್ದಾರೆ. ಟ್ರಂಪ್ರ ಹೇಳಿಕೆಗೆ ಇಡೀ ವಿಶ್ವದಿಂದಲೇ ಟೀಕೆಯ ಸುರಿಮಳೆಯಾಗಿದೆ. ತದನಂತರ ಟ್ರಂಪ್ ಅವರು ಅದೆಲ್ಲ ತಮಾಶೆಗೆ ಹೇಳಿದೆ ಎಂದಿದ್ದಾರೆ. ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಈ ಹೇಳಿಕೆ ನೀಡಿದ್ದರು..
ಗುರುವಾರ ವೈಟ್ಹೌಸ್ನಲ್ಲಿ ಯುವಿ ಕಿರಣಗಳು ಮತ್ತು ಅಣು ನಾಶಕಗಳನ್ನು ಉಪಯೋಗಿಸುವ ಸಾಧ್ಯತೆಯ ಕುರಿತು ಮಾತಾಡಿದ್ದರು. ಕೊರೊನಾ ವೈರಸ್ಗೆ ಉನ್ನತ ಸೂರ್ಯ ತಾಪದಲ್ಲಿ ಮನುಷ್ಯನ ದೇಹದಲ್ಲಿ ಇರಲು ಸಾಧ್ಯವಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾದರೆ ಬಲವಾದ ಆಲ್ಟ್ರಾವಯಲೆಟ್ ಕಿರಣಗಳನ್ನು ಶರೀರಕ್ಕೆ ಕಳುಹಿಸಿ ವೈರಸ್ ಅನ್ನು ನಿಗ್ರಹಿಸುವ ಸಾಧ್ಯತೆ ಪರಿಶೀಲಿಸಬಾರದೆ? ಐಸೊಪ್ರೊಪಿಲ್ ಅಲ್ಕೊಹಾಲ್ಗೆ ಕ್ಷಣಗಳಲ್ಲಿ ಕೊರೊನ ಇಲ್ಲದಾಗಿಸಲು ಸಾಧ್ಯವಿದೆ. ಹಾಗಿದ್ದರೆ ಅದನ್ನು ಚಿಕಿತ್ಸೆಗೆ ಬಳಸಬಾರದೇ ಎಂದು ಟ್ರಂಪ್ ಕೇಳಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












