ಸನ್ಮಾರ್ಗ ವಾರ್ತೆ
ಬೀಜಿಂಗ್, ಎ. 25: ಉತ್ತರ ಕೊರಿಯದ ಅಧ್ಯಕ್ಷ ಕಿಂ ಜೊಂಗ್ ಉನ್‍ರ ಆರೋಗ್ಯ ತಪಾಸಣೆಗೆ ವೈದ್ಯಕೀಯ ತಜ್ಞರು ಉತ್ತರ ಕೊರಿಯಕ್ಕೆ ಹೋಗಿದ್ದಾರೆ. ಚೀನದ ಕಮ್ಯುನಿಸ್ಟ್ ಪಾರ್ಟಿಯ ಹಿರಿಯ ಸದಸ್ಯರು ಈ ತಂಡಕ್ಕೆ ನೇತೃತ್ವವನ್ನು ನೀಡಿದ್ದಾರೆ. ತಂಡದ ಇತರ ಸದಸ್ಯರನ್ನು ಚೀನ ಬಹಿರಂಗಪಡಿಸಿಲ್ಲ. ಎಪ್ರಿಲ್ 12ಕ್ಕೆ ನಡೆದ ಹೃದಯ ಶಸ್ತ್ರಕ್ರಿಯೆಯ ಬಳಿಕ ಕಿಮ್‍ರ ಆರೋಗ್ಯ ಗಂಭೀರವಾಗಿತ್ತು. ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಕೂಡ ಸುದ್ದಿ ಪ್ರಚಾರವಾಗಿತ್ತು. ಆದರೆ ವರದಿಯನ್ನು ಚೀನ ಮತ್ತು ದಕ್ಷಿಣಕೊರಿಯ ತಿರಸ್ಕರಿಸಿದೆ. ಉತ್ತರ ಕೊರಿಯ ಅದನ್ನು ತಿರಸ್ಕರಿಸಿಲ್ಲ. ಒಪ್ಪಿಕೊಂಡಿಲ್ಲ.
ಆದರೆ ಶಸ್ತ್ರ ಕ್ರಿಯೆಯ ಬಳಿಕ ಕಿಮ್‍ರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆಯಾಗಿದೆ ಎಂದು ಅಜ್ಞಾತ ಮೂಲಗಳ ಆಧಾರದಲ್ಲಿ ದಕ್ಷಿಣ ಕೊರಿಯನ್ ವೆಬ್‍ಸೈಟ್ ಡೈಲಿ ಎನ್‍ಕೆ ವರದಿ ಮಾಡಿದೆ. ಕಿಂರ ಆರೋಗ್ಯ ಬಿಗಡಾಯಿಸಿದೆ ಎಂಬ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಒಪ್ಪಿಕೊಂಡಿಲ್ಲ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












