ಸನ್ಮಾರ್ಗ ವಾರ್ತೆ
ಸಾವೊಪೊಲೊ, ಎ. 25: ಅಧ್ಯಕ್ಷರೊಂದಿಗೆ ಭಿನ್ನಮತದಿಂದಾಗಿ ಬ್ರೆಝಿಲ್ನ ಕಾನೂನು ಸಚಿವ ಸರ್ಜಿಯೊ ಮೊರೊ ರಾಜೀನಾಮೆ ನೀಡಿದ್ದಾರೆ. ದೇಶದ ದೊಡ್ಡ ಭ್ರಷ್ಟಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಜಡ್ಜ್ ಕೂಡ ಸರ್ಜಿಯೊ ಮೊರೊ ಆಗಿದ್ದಾರೆ. ಫೆಡರಲ್ ಪೊಲೀಸ್ ಮುಖ್ಯಸ್ಥ ರನ್ನು ಅಧ್ಯಕ್ಷ ಜೇರ್ ಬೊಲ್ಸೊನೊರೊ ತೆಗೆದು ಹಾಕಿದ ಬೆನ್ನಿಗೆ ಮೊರೊ ರಾಜೀನಾಮೆ ನೀಡಿದರು. ಬೊಲ್ಸೊನೊರೊ ತಾನು ಬಯಸುವ ವ್ಯಕ್ತಿಯನ್ನು ಇಂಟಲಿಜೆನ್ಸ್ ಮುಖ್ಯಸ್ಥನ ಸ್ಥಾನಕ್ಕೆ ತರಲು ಬಯಸುತ್ತಿದ್ದಾರೆ ಎಂದು ಮೊರೊ ಹೇಳಿದ್ದು, ಬೊಲ್ಸೊನೊರೊ ಇದನ್ನು ತಿರಸ್ಕರಿಸಿದ್ದಾರೆ. ಆರೋಪದ ಮೇಲೆ ತನಿಖೆ ನಡೆಸಬೇಕಾಗಿದೆ ಎಂದು ಬ್ರೆಝಿಲ್ ಪ್ರಾಸಿಕ್ಯೂಟರ್ ಆಗಸ್ಟೊ ಅರಾಸ್ ಸುಪ್ರೀಂಕೋರ್ಟಿಗೆ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರ ವಿಷಯಗಳಲ್ಲಿ ಪೊಲೀಸರು ತನೀಖೆ ಮಾಡುವಾಗ ಅಧ್ಯಕ್ಷರು ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಮೊರೊ ಆರೋಪಿಸಿದ್ದರು. ಈ ತಿಂಗಳಲ್ಲಿ ಆರೋಗ್ಯ ಸಚಿವ ಲುಯಿಸ್ ಹಾಂಡ್ರಿಕ್ ಮಂಡೇಟರನ್ನೂ ಬೊಲ್ಸೊನರೋ ಕಿತ್ತು ಹಾಕಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












