ಪಂಪವೆಲ್ ಮೇಲ್ಸೇತುವೆಯಲ್ಲಿ ಬಿರುಕು: ಮತ್ತೆ ಟ್ರೋಲ್ ಗೆ ಒಳಗಾಗಿರುವ ಸಂಸದ ಕಟೀಲ್- ವೀಡಿಯೊ

0
902

ಸನ್ಮಾರ್ಗ ವಾರ್ತೆ

ಮಂಗಳೂರು, ಏಪ್ರಿಲ್ 26-  ಹತ್ತು ವರ್ಷಗಳ ದೀರ್ಘ ಅವಧಿಯಲ್ಲಿ ನಿರ್ಮಾಣಗೊಂಡ ಪಂಪವೆಲ್ ಸೇತುವೆಯು ಶುಕ್ರವಾರದ ಮಳೆಗೆ ಬಿರುಕು ಬಿಟ್ಟಿದ್ದು, ಮತ್ತೊಮ್ಮೆ ಟ್ರೋಲ್ ಗೆ ಒಳಗಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಳೆದ ಚುನಾವಣೆಯಲ್ಲಿ ಮತ್ತು ಅದಕ್ಕಿಂತ ಮೊದಲೇ ಈ ಸೇತುವೆಯ ನಿಧಾನ ಕಾಮಗಾರಿಗಾಗಿ ಟ್ರೋಲ್ ಗೆ ಒಳಗಾಗಿದ್ದರು. ಅಂತೂ ಇಂತೂ ಮೇಲ್ಸೇತುವೆ ಗಡಿಬಿಡಿಯಿಂದ ಉದ್ಘಾಟನೆಗೊಂಡಿತಾದರೂ ಇದೀಗ ಮೊದಲ ಮಳೆಗೆ ತನ್ನ ಗುಣಮಟ್ಟವನ್ನು ತೋರಿಸಿದೆ.

ಮಳೆನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದಿರುವುದೂ ಸೇರಿದಂತೆ, ಅಸಮರ್ಪಕ ನಿರ್ಮಾಣ ಕಾಮಗಾರಿಯಿಂದಾಗಿ ಸೇತುವೆಯ ಭವಿಷ್ಯ ಡೋಲಾಯಮಾನವಾಗಿದೆ. ಈ ಬಗ್ಗೆ ವೀಡಿಯೊ ಇನ್ನಷ್ಟು ಮಾಹಿತಿಯನ್ನು ನೀಡುತ್ತಿದೆ.

 

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.