ಸನ್ಮಾರ್ಗ ವಾರ್ತೆ
ಪುಣೆ, ಎ. 26 : ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಕೊರೊನಾ ಪೀಡಿತರಾಗಿ ಮೃತಪಟ್ಟಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಪ್ರಚಾರವಾಗಿದ್ದು ಪುಣೆಯ ವೈದ್ಯೆ ಮೇಘಾ ವ್ಯಾಸ್ರಲ್ಲ ಎಂದು ತಿಳಿದು ಬಂದಿದೆ. ರೋಗಕ್ಕೆ ತುತ್ತಾಗಿ ಮೇಘಾ ವ್ಯಾಸ್ ಮೃತಪಟ್ಟಿದ್ದಾರೆ ಎಂದು ಚಿತ್ರ ಪ್ರಚಾರವಾಗಿತ್ತು. ಆದರೆ ಚಿತ್ರದಲ್ಲಿ ಪುಣೆಯ ಜಹಾನ್ಗೀರ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಮಹಿಳೆ ಮೇಘಾ ಶರ್ಮ ಆಗಿದ್ದಾರೆ. ಅವರು ನ್ಯೂಮೋನಿಯದಿಂದ ಮೃತಪಟ್ಟಿದ್ದರು. ಈ ಮಹಿಳೆಯನ್ನು ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಫಲಿತಾಂಶ ನೆಗಟಿವ್ ಆಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ಕೊರೊನಾದಿಂದ ಮೇಘ ಮೃತಪಟ್ಟಿಲ್ಲ ಎಂದು ಅವರ ಪತಿ ಶ್ರೀಕಾಂತ್ ಶರ್ಮ ಹೇಳಿದ್ದಾರೆ. ನನ್ನ ಪತ್ನಿ ವೈದ್ಯೆಯಲ್ಲ. ಗೃಹಿಣಿ. ಅವರು ಕೊರೊನಾ ಪರಿಶೀಲನೆ ನೆಗಟಿವ್ ಆಗಿತ್ತು. ತಪ್ಪು ವಾರ್ತೆ ಹರಡಿದವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಶ್ರೀಕಾಂತ್ ಶರ್ಮ ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












