ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 26: ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಮೇ ಮೂರವರೆಗೆ ಘೋಷಿಸಿದ ಲಾಕ್ ಡೌನ್ ಮುಂದುವರೆಸುವ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಭಿನ್ನ ಅಭಿಪ್ರಾಯಗಳಿವೆ. ಕೆಲವು ರಾಜ್ಯಗಳು ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಯಬೇಕೆಂದು ಹೇಳುತ್ತಿವೆ. ಕೆಲವು ರಾಜ್ಯಗಳು ಹಾಟ್ ಸ್ಪಾಟ್ಗಳಿಗೆ ಮಾತ್ರ ಲಾಕ್ ಡೌನ್ ಇದ್ದರೆ ಸಾಕು ಎನ್ನುತ್ತಿವೆ.
ಈಗ ತೆಲಂಗಾಣ ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಸಲಿದೆ. ಮೇ ಏಳರವರೆಗೆ ಲಾಕ್ ಡೌನ್ ಅಲ್ಲಿ ಘೋಷಿಸಲಾಗಿದೆ. ಮಾರ್ಚ್ 24ಕ್ಕೆ ಲಾಕ್ ಡೌನ್ ಘೋಷಿಸಿ ಎಪ್ರಿಲ್ 14ರವರೆಗೆ ಒಂದನೇ ಹಂತದ ಲಾಕ್ ಡೌನ್ ಆಗಿತ್ತು. ಆದರೆ ವೈರಸ್ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಮೇ ಮೂರರ ವರೆಗೆ ಎರಡನೆ ಹಂತದ ಲಾಕ್ ಡೌನ್ ಘೋಷಿಸಿಸಲಾಗಿದೆ. ದಿಲ್ಲಿಯಲ್ಲಿ ಮೇ ಹದಿನೈದರವರೆಗೆ ಲಾಕ್ ಡೌನ್ ಇರಬೇಕೆಂದು ತಜ್ಞರು ಹೇಳುತ್ತಿದ್ದಾರೆ. ದಿಲ್ಲಿಯಲ್ಲಿ 2665 ಮಂದಿಗೆ ಕೊರೊನಾ ಇದೆ. 54 ಮಂದಿ ಮೃತಪಟ್ಟಿದ್ದಾರೆ. ಈಗಲೂ ದೇಶದಲ್ಲಿ ಕೊರೊನಾ ಕಡಿಮೆಯಾಗಿಲ್ಲ. ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ನಿಯಂತ್ರಣಗಳನ್ನು ಕಡಿತಗೊಳಿಸುವುದು ಸಮಸ್ಯೆಯಾಗಬಹುದು ಎಂದು ದಿಲ್ಲಿ ಸರಕಾರದ ಕೊರೊನಾ ಪ್ರತಿರೋಧ ಸಮಿತಿ ಅಧ್ಯಕ್ಷ ಡಾ. ಎಸ್ ಕೆ ಸಿರಿನ್ ಹೇಳಿದ್ದಾರೆ. ಮೇ16ರವರೆಗೆ ಲಾಕ್ ಡೌನ್ ಮುಂದುವರಿಸಬೇಕೆಂದು ಅವರು ಹೇಳಿದ್ದಾರೆ.
ಕೊರೊನಾ ಹೆಚ್ಚು ಹರಡದ ಜಿಲ್ಲೆಗೆ ವಿನಾಯಿತಿ ಕೊಡಬೇಕೆಂದು ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್, ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಯಸಿದ್ದಾರೆ. ರಾಜಸ್ಥಾನ, ಒಡಿಸ್ಸ, ಛತ್ತೀಸ್ಗಡ, ಬಿಹಾರಗಳು ಲಾಕ್ ಡೌನ್ನಲ್ಲಿ ವಿನಾಯಿತಿ ಬಯಸುತ್ತಿವೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












