ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಎ. 27: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕೊಲೆ ಬೆದರಿಕೆ ಹಾಕಿದ್ದ ಟೆಕ್ಸಾಸ್ನ 36 ವರ್ಷದ ವ್ಯಕ್ತಿಗೆ ಕೋರ್ಟು ಜೈಲು ಶಿಕ್ಷೆ ವಿಧಿಸಿದೆ. ಟೆಕ್ಸಾಸ್ನವನಾದ ಈ ವ್ಯಕ್ತಿ ಯೂ ಟ್ಯೂಬ್ನಲ್ಲಿ ಅಧ್ಯಕ್ಷರನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದನು. ಕೋರ್ಟು ಈತನಿಗೆ 18 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಅಮೆರಿಕದ ಗುಪ್ತಚರ ವಿಭಾಗ ರಹಸ್ಯ ತನಿಖೆ ಮಾಡಿ ಆಪರಾಧಿಯನ್ನು ಹಿಡಿಯಿತು. ವಿಚಾರಣೆಯ ವೇಳೆ ಯುವಕ ತಪ್ಪನ್ನು ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












