ಸನ್ಮಾರ್ಗ ವಾರ್ತೆ
ಜೆರುಸಲೇಂ, ಎ. 27: ಕೊರೊನಾ ಪ್ರತಿರೋಧದಲ್ಲಿ ಲೋಪವಾಗಿದೆ ಎಂದು ಹೆಚ್ಚು ಆಕ್ಷೇಪಕ್ಕೊಳಗಾದ ಆರೋಗ್ಯ ಸಚಿವ ಯಾಕೋವ್ ಲಿಟ್ಸ್ ಮೆನ್ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ರಾಜೀನಾಮೆ ನೀಡಿರುವುದನ್ನು ಅವರು ಮಾಧ್ಯಮಗಳಿಗೆ ತಿಳಿಸಿದ್ದು ಸರಕಾರ ಈವರೆಗೂ ರಾಜೀನಾಮೆ ಸ್ವೀಕರಿಸಿಲ್ಲ ಎಂದು ಹಾರೈಟ್ಸ್ ವರದಿಮಾಡಿದೆ.
ಯಾಕೊವ್ ಲಿಟ್ಸ್ಮೆನ್ ಕೊರೊನಾ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಇಲ್ಲಿ 15,398 ಮಂದಿಗೆ ರೋಗ ಬಂದಿದೆ. 199 ಮಂದಿ ಮೃತಪಟ್ಟಿದ್ದಾರೆ. ಆರಂಭದಲ್ಲಿ ಸಾಮಾಜಿಕ ಅಂತರ ಪಾಲಿಸುವುದರಿಂದ ತೀವ್ರವಾದಿ ಆರ್ಥೊಡೆಕ್ಸ್ ಯಹೂದಿ ಸಮುದಾಯಕ್ಕೆ ವಿನಾಯಿತಿ ನೀಡಲಾಗಿತ್ತು. ಜನರ ನಡುವೆ ರೋಗ ವ್ಯಾಪಿಸಲು ಇದು ಕಾರಣವಾಯಿತು ಎಂದು ಆಕ್ಷೇಪ ಕೇಳಿಬಂದಿದೆ. ಸಿನೆಗೋಗ್, ಸಾರ್ವಜನಿಕ ಸ್ನಾನದ ಕೋಣೆಗಳು ತೆರೆದಿಟ್ಟದ್ದು ರೋಗ ವ್ಯಾಪಿಸಲು ಕಾರಣವಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












