ಸನ್ಮಾರ್ಗ ವಾರ್ತೆ
ಬೀದರ್: ನಗರದ ಝೀರಾ ಕನ್ವೆನ್ಷನ್ ಹಾಲ್ನಲ್ಲಿ ನವೆಂಬರ್ 18ರಂದು ನಡೆದ 73ನೇ ಅಖಿಲ ಭಾರತ ಸಹಕಾರಿ ಸಪ್ತಾಹ–2026ರ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಬೀದರ್ನ ಕಾರುಣ್ಯ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ ‘ಉತ್ತಮ ಸಹಕಾರಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಂಘದ ಉತ್ತಮ ಕಾರ್ಯನಿರ್ವಹಣೆ ಹಾಗೂ ಕಡಿಮೆ ಅವಧಿಯಲ್ಲಿ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಸಂಘದ ಅಧ್ಯಕ್ಷ ಜ. ರಫೀಕ್ ಅಹ್ಮದ್ ಗಾದಗಿ ಮತ್ತು ವ್ಯವಸ್ಥಾಪಕ ಅಧ್ಯಕ್ಷ ಜ. ಮುಜ್ತಬಾ ಖಾನ್ ಅವರು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ರಫೀಕ್ ಅಹ್ಮದ್ ಗಾದಗಿ, ಕಡಿಮೆ ಅವಧಿಯಲ್ಲಿ ಸಂಘವು ಉತ್ತಮ ಸಾಧನೆ ಮಾಡಿದ್ದು, ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಸಂಘದ ವ್ಯವಸ್ಥಾಪಕ ಅಧ್ಯಕ್ಷ ಮುಜ್ತಬಾ ಖಾನ್ ಮಾತನಾಡಿ, ಸಂಘವು ವಿತರಿಸಿರುವ ಸಾಲಗಳ ಮರುಪಾವತಿ ಪ್ರಮಾಣ ತೃಪ್ತಿಕರವಾಗಿದೆ. ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ವ್ಯಾಪಾರ ಸರಕುಗಳ ಖರೀದಿಗೂ ಸಾಲ ನೀಡುವ ಮೂಲಕ ಸಣ್ಣ ವ್ಯಾಪಾರಸ್ಥರಿಗೆ ನೆರವಾಗುತ್ತಿದೆ. ಹೀಗಾಗಿ ಸಂಘವು ಸಣ್ಣ ವ್ಯಾಪಾರಸ್ಥರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಬಡ್ಡಿಮುಕ್ತ ಸಮಾಜ ನಿರ್ಮಾಣವು ಸಂಘದ ಕನಸಾಗಿದ್ದು, ಈ ಗುರಿ ಸಾಧನೆಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯತ್ನಗಳನ್ನು ಕೈಗೊಳ್ಳಲಾಗುವುದು. ಬೀದರ್ ಜಿಲ್ಲೆಯ ಜನರು ಸಂಘದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಏಹತೆಶಾಮ್ ಉಲ್ ಹಕ್, ಮಹ್ಮದ್ ಆಸಿಫೋದ್ದಿನ್, ಮಹ್ಮದ್ ಜಾವೀದ್ ಅಹ್ಮದ್, ಮುಹಮ್ಮದ್ ನಿಝಾಮೋದ್ದಿನ್, ರಹಮತುಲ್ಲಾ ಖಾನ್, ಶೇಖರ ಚವ್ಹಾಣ, ಅಶ್ಪಾಕ್ ಅಹ್ಮದ್, ಅಕ್ರಮ್ ಅಲಿ, ಮುಬಸ್ಸಿರ್ ಸಿಂಧೆ, ಸಬೀಹಾ ಖಾನಮ್, ಅಸ್ಮಾ ಬೇಗಂ ಹಾಗೂ ಸಂಘದ ವ್ಯವಸ್ಥಾಪಕ ಜ. ಮುಹಮ್ಮದ್ ಬಶಾರತ್ ಅಲಿ ಉಪಸ್ಥಿತರಿದ್ದರು.












