ಆನ್‍ಲೈನ್‍ನಲ್ಲಿ ಮೆಹಂದಿ, ಸಂಗೀತ, ಮಂತ್ರೋಚ್ಛಾರಣೆ: ಇದು ಕೊರೊನಾ ಮದುವೆ ಕಾಲ

0
746

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 27: ಮಧ್ಯಪ್ರದೇಶದ ಗುನದ ಹನ್ನೆರಡು ವಧೂ ವರರು ವೀಡಿಯೊ ಕಾನ್ಫರೆನ್ಸ್ ಮೂಲಕ ಮದುವೆ ಮಾಡಿಕೊಂಡು ದಾಂಪತ್ಯದ ಹೊಸಿಲು ದಾಟಿದರು. ಎಲ್ಲರೂ ವೀಡಿಯೊ ಕಾಲ್ ನ ಮೂಲಕ ಕುಬೂಲ್ ತಿಳಿಸಿದರು. ಒಂದು ಗಂಟೆ ಕೂಡ ಮದುವೆಗೆ ವ್ಯಯವಾಗಿಲ್ಲ. ಮನೆಯಿಂದ ಹೊರ ಬಂದೂ ಇಲ್ಲ. ಹೀಗೆ ಅವರು ಮದುವೆಯಾಗಿದ್ದಾರೆ. ಲಾಕ್ ಡೌನ್ ಯಾವಾಗ ಮುಗಿಯುತ್ತದೆ ಎಂದು ಯಾರಿಗೆ ಗೊತ್ತಿದೆ. ಆದ್ದರಿಂದ ಮದುವೆ ವಧು ವರರು ಮತ್ತು ಅವರ ಕುಟುಂಬಗಳು ಆನ್‍ಲೈನ್ ಮದುವೆ ನಡೆಸುವ ಉಪಾಯಕ್ಕೆ ಬಂದರು.
ಮಧ್ಯಪ್ರದೇಶದ ಅವಿನಾಶ್, ಕೀರ್ತಿಗೆ ಮದುವೆ ಉತ್ತಮ ರೀತಿಯಲ್ಲಿ ಮಾಡಿಕೊಂಡ ತೃಪ್ತಿಯಿದೆ. ಅದು ಕೂಡ ಬೇಕಾದವರ ಉಪಸ್ಥಿತಿಯಲ್ಲಿ. ಎಪ್ರಿಲ್ 14ಕ್ಕೆ ವರ್ಚುವಲ್ ಮದುವೆ. ಒಡಹುಟ್ಟಿದವರು ತಂದೆ ತಾಯಿ ಬಂಧು ಮಿತ್ರರು ಹೀಗೆ ಎಂಬತ್ತು ಮಂದಿ ಭಾಗಹಿಸಿದರು.

ಆನ್‍ಲೈನ್‍ನಲ್ಲಿ ಮೆಹಂದಿ ಸಂಗೀತ ಕಾರ್ಯಕ್ರಮ ಅಡಚಣೆಯಿಲ್ಲದೆ ನಡೆಯಿತು. ಹಿಂದೂ ಆಚಾರದಂತೆ ಪುರೋಹಿತರ ನೇತೃತ್ವದಲ್ಲಿ ವೀಡಿಯೊ ಕಾಲ್‍ನಲ್ಲಿ ಮಂತ್ರೋಚ್ಛಾರಣೆ ನಡೆಯಿತು. ಮಧ್ಯಪ್ರದೇಶದ ಸಾತ್ನಾದಲ್ಲಿ 8000 ಮಂದಿ ಭಾಗವಹಿಸಿದ ಕಾರ್ಯಕ್ರಮಕ್ಕೆ ಅವಿನಾಶ್ ಸಿದ್ಧತೆ ಮಾಡಿಕೊಂಡಿದ್ದರು.

ಅದರೆ ಲಾಕ್ ಡೌನ್‍ನಿಂದ ಮದುವೆ ಮುಂದೂಡುವುದು ಅವರಿಗೆ ಕಷ್ಟದ ವಿಚಾರ ಆಗಿತ್ತು. ಇಂತಹ ಹಲವು ಮದುವೆಗಳು ಕೊರೊನಾ ಕಾಲದಲ್ಲಿ ನಡೆಯಿತು. ಮಾರ್ಚ್, ಎಪ್ರಿಲ್ ಮದುವೆ ಸೀಝನ್ ಆದ್ದರಿಂದ ಮದುವೆ ಮುಂದೂಡಲು ಮನಸ್ಸಿಲ್ಲದವರು ವೆರ್ಚುವೆಲ್ ವೆಡ್ಡಿಂಗ್ ಮಾಡಿಕೊಂಡು ಮದುವೆ ಕಾರ್ಯ ಮುಗಿಸಿಕೊಂಡಿದ್ದಾರೆ. ಮುಂಬೈಯ ಸುಸೇನ್‍ಗೆ ಎಪ್ರಿಲ್ 19ರಂದು ಆನ್‍ಲೈನ್ ಮದುವೆ ಆಯಿತು. ಅದು ವೆಡ್ಡಿಂಗ್ ಫ್ರಮ್ ಹೋಂ ಎಂಬ ಸೇವೆಯನ್ನು ವೆಡ್ಡಿಂಗ್ ಬ್ಯೂರೊಗಳು ಮುಂದಿಡತೊಡಗಿದವು. ಮದುವೆಯನ್ನು ಮುಂದೂಡಲು ಆಗದವರು ನೈಜ ಮದುವೆ ಕಾರ್ಯಕ್ರಮದಂತೆ ವೆಡ್ಡಿಂಗ್ ಬ್ಯೂರೊಗಳು ಮದುವೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿವೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.