ಸನ್ಮಾರ್ಗ ವಾರ್ತೆ

ನವದೆಹಲಿ ಏಪ್ರಿಲ್, 30- ಮುಸ್ಲಿಮರ ವಿರುದ್ಧ ದ್ವೇಷದ ಪ್ರಚಾರ ನಡೆಸುತ್ತಿರುವವರ ಬಗ್ಗೆ ಸೌದಿ ವಿದ್ವಾಂಸ ಆಬಿದಿ ಝಹ್ರಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿದ್ದುಕೊಂಡು ಇಸ್ಲಾಮ್, ಮುಸ್ಲಿಮ್ ಮತ್ತು ಪ್ರವಾದಿ ಮುಹಮ್ಮದರ ವಿರುದ್ಧ ದ್ವೇಷವನ್ನು ಹರಡುವ ಹಿಂದೂಗಳ ಪಟ್ಟಿ ತಯಾರಿಸುವಂತೆ ತನ್ನ ಟ್ವೀಟರ್ ಫಾಲೋವರ್ಸ್ ಗಳಲ್ಲಿ ಮನವಿ ಮಾಡಿಕೊಂಡಿರುವ ಅವರು, ಇಂತಹ ತೀವ್ರವಾದಿ ಹಿಂದೂಗಳನ್ನು ಭಾರತಕ್ಕೆ ಮರಳಿ ಕಳುಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗಲ್ಫ್ ರಾಷ್ಟ್ರಗಳು ಲಕ್ಷಾಂತರ ಭಾರತೀಯರಿಗೆ ಆತಿಥ್ಯ ನೀಡಿವೆ ಮತ್ತು ಇವರಲ್ಲಿ ಕೊರೋನಾ ಸೋಂಕಿತರೂ ಇದ್ದು ಅವರಿಗೆ ಧರ್ಮ ಬೇಧವಿಲ್ಲದೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದೆ. ಆದರೆ ಹಿಂದುತ್ವ ಗ್ಯಾಂಗ್ ಗಳು ಮುಸ್ಲಿಮರ ವಿರುದ್ಧ ಅಪರಾಧವನ್ನು ಎಸಗುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೊದಲು ಯುಎಇ ರಾಜಕುಮಾರಿ ಹಿಂದ್ ಫೈಸಲ್ ಕಸ್ಸೆಮಿ ಅವರು ಕೂಡ ಅರಬ್ ರಾಷ್ಟ್ರಗಳಲ್ಲಿ ಇದ್ದು, ಮುಸ್ಲಿಮರ ವಿರುದ್ಧ ದ್ವೇಷದ ಪ್ರಚಾರ ಮಾಡುವ ಭಾರತೀಯ ಹಿಂದುಗಳ ಬಗ್ಗೆ ಕಿಡಿಕಾರಿದ್ದರು. ವಿಶೇಷವಾಗಿ ಸೌರಭ್ ಉಪಾಧ್ಯಾಯ ಅವರ ಟ್ವೀಟ್ ಅನ್ನು ಉಲ್ಲೇಖಿಸಿದ್ದರು. ಮಾತ್ರವಲ್ಲ, ನೀವು ಅಪಹಾಸ್ಯ ಮಾಡುವ ಈ ಭೂಮಿಯಿಂದ ನಿಮ್ಮ ಬ್ರೆಡ್ ಮತ್ತು ಬೆಣ್ಣೆಯನ್ನು ತಯಾರಿಸುತ್ತೀರಿ ಎಂದೂ ನೆನಪಿಸಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












