ಸನ್ಮಾರ್ಗ ವಾರ್ತೆ
ಇದು ಕೊರೋನಾ ಕಾಲದ ಪಾಸಿಟಿವ್ ಸುದ್ದಿ
ರಾಘವೇಂದ್ರ ಅಡಿಗ
ಬೆಂಗಳೂರು: ಚಿಪ್ಸ್ ನಿಂದ ದೋಸೆಯ ವರೆಗೆ, ಆಟಿಕೆಗಳಿಂದ ಗೇಮ್ ಗಳ ವರೆಗೆ, ರೇಜರ್ ಗಳಿಂದ ನೈಲ್ ಕಟರ್ ವರೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ರೋಗಿಗಳು ಏನು ಬೇಕೆಂದರೂ ಅದನ್ನು ಪಡೆಯುತ್ತಾರೆ. ಆದರೆ ಹೀಗೆ ಒದಗಿಸುತ್ತಿರುವವರು ಯಾರೆಂದು ಯಾವೊಬ್ಬ ರೋಗಿಯೂ ತಿಳಿದಿಲ್ಲ. ಅವರು ವಿಕ್ಟೋರಿಯಾ ಆಸ್ಪತ್ರೆಯ ಆಘಾತ ಮತ್ತು ತುರ್ತು ಆರೈಕೆ ಕೇಂದ್ರದ ನೋಡಲ್ ಅಧಿಕಾರಿ ಡಾ.ಅಸೀಮಾ ಬಾನು. ಸಧ್ಯ ಬಾನು ಅವರು ಕೊರೋನಾ ಸೋಂಕು ನಿವಾರಣಾ ತಂಡದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ.
ಇಡೀ ಬ್ಲಾಕ್ನ ಉಸ್ತುವಾರಿಯನ್ನು ಡಾ.ಅಸೀಮಾ ವಹಿಸಿದ್ದಾರೆ. ಇದು ನನಗೆ ತುಂಬಾ ಹೊಸದು ಮತ್ತು ಸವಾಲಿನ ಕೆಲಸವಾಗಿದೆ. ನಾನು ಚಿಕಿತ್ಸೆ ಕುರಿತು ತಲೆಕೆಡಿಸಿಕೊಳ್ಳುವುದು ಮಾತ್ರವಲ್ಲದೆ ರೋಗಿಗಳು ಏನು ಬಯಸುತ್ತಾರೆ ಎಂಬುದರ ಬಗ್ಗೆಯೂ ಗಮನಹರಿಸಬೇಕು. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಅವರಿಲ್ಲಿಯೇ ಇರುವುದರಿಂದ ನಾವು ಅವರನ್ನು ಸಂತೋಷವಾಗಿರಿಸಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ. ರೋಗಿಗಳು ಪರೀಕ್ಷೆಗೆ ಬಂದಾಗ ಅವರು ಕೇವಲ ಫೋನ್ ಮಾತ್ರವೇ ತಂದಿರುತ್ತಾರೆ. ಅವರಿಗೆ ದಿನನಿತ್ಯ ಅಗತ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ನಾವು ಪೂರೈಸಬೇಕು- ಎಂದು ಡಾ.ಅಸೀಮಾ ಹೇಳುತ್ತಾರೆ.
“ಒಂದೊಮ್ಮೆ ಪರೀಕ್ಷಿಸಲು ಬಂದ ರೋಗಿಗಳಿಗೆ ರೋಗಲಕ್ಷಣವಿದ್ದರೆ ಆ ಪರೀಕ್ಷಾ ವರದಿ ಬರುವವರೆಗೆ ಅವರನ್ನು ಕ್ವಾರಂಟೈನ್ ನಲ್ಲಿರಿಸಬೇಕು. ಹಾಗೊಮ್ಮೆ ಅವರಿಗೆ ಪಾಸಿಟಿವ್ ಎಂದು ವರದಿ ಬಂದರೆ ಅವರನ್ನು ನೇರವಾಗಿ ಗೊತ್ತುಪಡಿಸಿದ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅವರೊಮ್ಮೆ ಅಲ್ಲಿಗೆ ತಲುಪಿದಾಗ ಸ್ವಾಭಾವಿಕವಾಗಿ, ಅವರು ಬಟ್ಟೆ ಅಥವಾ ಇತರ ಅಗತ್ಯ ವಸ್ತುಗಳನ್ನು ತರುವುದಿಲ್ಲ. ಮತ್ತು ಒಮ್ಮೆ ಅವರು ಕೊರೋನಾ ಪಾಸಿಟಿವ್ ಎಂದು ದೃಢವಾಗಿದ್ದರೆ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಕಂಡುಹಿಡಿಯಲಾಗುತ್ತದೆ ಮತ್ತು ಅವರನ್ನು ಪ್ರತ್ಯೇಕಿಸಲಾಗುತ್ತದೆ. ಆದ್ದರಿಂದ ಆಸ್ಪತ್ರೆಯಲ್ಲಿ ತಮ್ಮ ದೈನಂದಿನ ಬಳಕೆಗೆ ಅಗತ್ಯವಾದ ವಸ್ತುಗಳನ್ನು ಪಡೆಯಲು ರೋಗಿಗೆ ಯಾವುದೇ ಮಾರ್ಗ ಇರುವುದಿಲ್ಲ. ಆಗ ಅವರು ನಿತ್ಯಬಳಕೆ ವಸ್ತುಗಳಿಗಾಗಿ ನಮ್ಮನ್ನು ಕೇಳುತ್ತಾರೆ. ಅದನ್ನು ನಾವು ಒದಗಿಸಬೇಕು ಎಂದವರು ಹೇಳುತ್ತಾರೆ.
“ಕೆಲವು ರೋಗಿಗಳು ಆಸ್ಪತ್ರೆಯ ಉಡುಪು ಧರಿಸಲು ಇಷ್ಟಪಡುವುದಿಲ್ಲ. ತಮ್ಮದೇ ಆದ ಬಟ್ಟೆಗಳನ್ನು ಬಯಸುತ್ತಾರೆ. ಆದ್ದರಿಂದ ಅಂತಹ ಸಂದರ್ಭಗಳಲ್ಲಿ, ನಾನು ನನ್ನ ಕುಟುಂಬವನ್ನು ಕರೆದು ಸಂಪೂರ್ಣವಾಗಿ ಸ್ವಚ್ಚ ಮಾಡಿದ್ದ ಕೆಲವು ಬಟ್ಟೆಗಳನ್ನು ಕಳುಹಿಸಲು ಹೇಳುತ್ತೇನೆ ಅವುಗಳಲ್ಲಿ ಕೆಲವು ಬಳಕೆಯಾಗಿದೆ. ನಾನು ಅದನ್ನು ರೋಗಿಗಳಿಗೆ ನೀಡುತ್ತೇನೆ. ಕೆಲವರಿಗೆ ಚಪ್ಪಲಿಗಳೂ ಬೇಕಾಗುತ್ತದೆ. ನಾನು ಅವರ ಚಪ್ಪಲಿಯ ಅಳತೆ ಪರಿಶೀಲಿಸಿ ಕುಟುಂಬಕ್ಕೆ ಸಂದೇಶವನ್ನು ರವಾನಿಸಿ ಅಲ್ಲಿಂದ ಅಗತ್ಯ ಗಾತ್ರದ ಚಪ್ಪಲಿ ತರಿಸಿಕೊಳ್ಳುತ್ತೇನೆ.
“ಇದುವರೆಗೆ ಕೋವಿಡ್ ಪಾಸಿಟಿವ್ ಇರುವ ಐವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆಟವಾಡಲು ಆಟಿಕೆ, ಗೇಮಿಂಗ್ ಸಲಕರಣೆ ಕೇಳುತ್ತಾರೆ. ಕೇಕ್ ಮತ್ತು ಚಾಕೊಲೇಟ್ಗ ಬೇಕೆಂದು ಹಠ ಮಾಡುತ್ತಾರೆ.ಅಂತಹ ವೇಳೆ ಅವುಗಳನ್ನು ಸ್ವಿಗ್ಗಿ ಮೂಲಕ ಅವರಿಗೆ ತಲುಪಿಸುತ್ತೇನೆ” ಎಂದು ವೈದ್ಯೆ ಬಾನು ಹೇಳುತ್ತಾರೆ.
ಡಾ. ಅಸೀಮಾ ಎಂದಿಗೂ ರೋಗಿಗಳ ಮುಂದೆ ಹೋಗಿಲ್ಲ. ಏಕೆಂದರೆ ಅಲ್ಲಿ ಹೆಚ್ಚು ದಾದಿಯರು, ವೈದ್ಯರು ಇರುತ್ತಾರೆ. ಡಾ. ಅಸೀಮಾ ಅವರು ರೋಗಿಗಳೊಂದಿಗೆ ವಾಟ್ಸಾಪ್ ಗುಂಪನ್ನು ರಚಿಸಿದ್ದಾರೆ ಮತ್ತು ಅವರು ಏನು ಬೇಕಾದರೂ ಅವರಿಗೆ ಸಂದೇಶ ಕಳುಹಿಸುತ್ತಾರೆ. “ಅವರು ನನ್ನನ್ನು ನೋಡಿಲ್ಲ, ಅವರಿಗೆ ತಿಳಿದಿರುವುದು ಡಾ. ಅಸೀಮಾ ಅವರು ಅವರಿಗೆ ಬೇಕಾದುದನ್ನು ನೀಡುತ್ತಾರೆ ಎಂದಷ್ಟೇ ಆಗಿದೆ” ಎಂದು ಅವರು ಹೇಳುತ್ತಾರೆ.
ಕೃಪೆ: ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












