ಸಾಮಾನು ತರಲು ಹೋದವ ಪತ್ನಿಯನ್ನೇ ಕರೆತಂದ: ಅಮ್ಮನ ರಂಪಾಟ

0
998

ಸನ್ಮಾರ್ಗ ವಾರ್ತೆ

ಗಾಝಿಯಾಬಾದ್, ಎ. 30: ಮನೆಗೆ ಅಗತ್ಯ ಸಾಮಾನುಗಳನ್ನು ಖರೀದಿಸಲು ಹೊರಗೆ ಹೋದ ಯುವಕ ಮನೆಗೆ ತನ್ನ ಪತ್ನಿಯನ್ನು ಕರೆದುಕೊಂಡು ಬಂದ. ತಾಯಿ ಹೇಳಿದ್ದ ಸಾಮಾನುಗಳನ್ನು ಕೂಡ ತಂದಿದ್ದಾನೆ. ಆದರೆ ಮಗ ಗುಡ್ಡುನೊಂದಿಗೆ ಆತನ ಪತ್ನಿಯನ್ನು ನೋಡಿದ ತಾಯಿ ಮನೆಯೊಳಗೆ ಬರಲು ಬಿಡಲಿಲ್ಲ. ನಾನು ಈ ಮದುವೆಯನ್ನು ಒಪ್ಪುವುದಿಲ್ಲ ಎಂದು ಹಟಹಿಡಿದು ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಉತ್ತರ ಪ್ರದೇಶದ ಸಾಹಿದಾಬಾದಿನಲ್ಲಿ ಘಟನೆ ನಡೆದಿದ್ದು ನಾನು ಮಗನನ್ನು ಸಾಮಾನು ತರಲು ಕಳುಹಿಸಿದ್ದು. ಅವನು ಮರಳಿದ್ದು ಆತನ ಪತ್ನಿಯೊಂದಿಗೆ. ಈ ಮದುವೆ ನಾನೊಪ್ಪಲಾರೆ ಎಂದು ತಾಯಿ ಪೊಲೀಸರ ಮುಂದೆ ಕಣ್ಣೀರುಗೆರೆದಿದ್ದಾರೆ.

ಗುಡ್ಡು ಎರಡು ತಿಂಗಳ ಹಿಂದೆ ಆರ್ಯಸಮಾಜ ಮಂದಿರಲ್ಲಿ ಮದುವೆ ಮಾಡಿಕೊಂಡಿದ್ದ. ಆದರೆ ಸಾಕ್ಷಿಗಳಿಲ್ಲದ ಕಾರಣ ಇವರ ಮದುವೆ ಸರ್ಟಿಫಿಕೆಟ್ ಸಿಕ್ಕಿಲ್ಲ. ಮತ್ತೊಮ್ಮೆ ಹರಿದ್ವಾರಕ್ಕೆ ಹೋಗಲು ನಿರ್ಧರಿಸಿದರೆ ಲಾಕ್ ಡೌನ್ ಬಂದಿತ್ತು. ಲಾಕ್ ಡೌನ್ ಆದ ಮೇಲೆ ಮದುವೆ ಸರ್ಟಿಫಿಕೆಟ್ ಸಿಗುವ ನಿರೀಕ್ಷೆಯಲ್ಲಿ ಗುಡ್ಡು ದಂಪತಿ ಇದ್ದಾರೆ. ಪತ್ನಿಯನ್ನು ಮನೆಗೆ ಕರೆತರಲು ಗುಡ್ಡುವನ್ನು ನಿರ್ಬಂಧಿಸಿದ್ದು ಲಾಕ್ ಡೌನ್ ಆಗಿತ್ತು. ಲಾಕ್ ಡೌನ್‍ನಲ್ಲಿ ಗುಡ್ಡುನ ಪತ್ನಿ ಸವಿತಾ ದಿಲ್ಲಿಯ ಬಾಡಿಗೆ ಮನೆ ಓನರ್ ಮನೆತೆರವುಗೊಳಿಸಲು ಹೇಳಿದ್ದರಿಂದ ಪತ್ನಿ ಸವಿತಾಳನ್ನು ಗುಡ್ಡುವಿಗೆ ಮನೆಗೆ ಕರೆತರುವುದು ಅನಿವಾರ್ಯವೆನಿಸಿಕೊಂಡಿತ್ತು. ಈ ದಂಪತಿಗೆ ಬಾಡಿಗೆ ಮನೆಯನ್ನು ಮರಳಿ ಕೊಡಬೇಕೆಂದು ಶಾಹಿದಾಬಾದ್ ಪೊಲೀಸರು ಕಟ್ಟಡ ಮಾಲಕನಿಗೆ ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.