ಕೊರೊನಾ: ಅಂಡಮಾನ್‍ನಲ್ಲಿ ಪತ್ರಕರ್ತನ ಬಂಧನ- ಪೊಲೀಸ್ ಕ್ರಮವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕೆ ಸೇಡು; ಆರೋಪ

0
508

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 30: ಕೊರೊನ ಪೀಡಿತ ವ್ಯಕ್ತಿಯೊಂದಿಗೆ ಫೋನ್ ಕರೆಮಾಡಿ ಮಾತಾಡಿದ್ದನ್ನು ಅಪರಾಧವೆಂಬಂತೆ ಕಂಡು ಅವರ ಮನೆಗೆ ಬಂಧುಗಳಿಗೆ ಸಂಪರ್ಕನಿಷೇಧ ಹೇರಿದ್ದೇಕ್ಕೆಂದು ವಿವರಿಸುವಂತೆ ಟ್ವೀಟ್ ಮಾಡಿದ್ದ ಸ್ವತಂತ್ರ ಪತ್ರಕರ್ತ ಝುಬೈರ್ ಅಹ್ಮದ್‍ರನ್ನು ಸೋಮವಾರ ರಾತ್ರೆ ಅಂಡಮಾನ್‍ನಲ್ಲಿ ಬಂಧಿಸಲಾಗಿದೆ. ಇವರಿಗೆ ಮಂಗಳವಾರ ಪೋರ್ಟ್ ಬ್ಲೇರ್ ಎಡಿಶನಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಾಮೀನು ನೀಡಿದ್ದಾರೆ. ಅಂಡಮಾನಿನ ಹದ್ದೋ ನಗರದ ನಾಲ್ವರಿರುವ ಕುಟುಂಬಕ್ಕಾದ ಕೆಟ್ಟ ಅನುಭವವನ್ನು ಮಾಧ್ಯಮ ವರದಿ ಮಾಡಿದ್ದರಿಂದ ಸೋಮವಾರ ಝುಬೈರ್ ಅಹ್ಮದ್‍ರನ್ನು ಬಂಧಿಸಲಾಗಿತ್ತು.

ಬಾಯಿಕಟ್ಟುವ ಪ್ರಶ್ನೆಗಳನ್ನು ಕೇಳಿದ್ದಕ್ಕೆ ತನ್ನನ್ನು ಬಂಧಿಸಲಾಗಿದೆ ಎಂದು ಝುಬೈರ್ ಹೇಳಿದ್ದಾರೆ. ಕೊರೊನಾ ರೆಡ್‍ಝೋನ್ ವಿಂಬರ್ರ್ಲಿ ಗಂಜ್‍ನಲ್ಲಿ ಝುಬೈರ್ ಅಹ್ಮದ್ ಕುಟುಂಬ ಸಹಿತ ವಾಸವಿದ್ದಾರೆ. ಸೋಮವಾರ ಸಂಜೆ ಪೊಲೀಸರು ಠಾಣೆಗೆ ಬರುವಂತೆ ಅವರಿಗೆ ತಿಳಿಸಿದ್ದರು. ಆದರೆ ಲಾಕ್‍ಡೌನ್ ಕಾರಣ ಹೋಗಲು ಸಾಧ್ಯವಾಗಲಿಲ್ಲ. ಆದರೆ ರಾತ್ರೆ ಎಂಟು ಗಂಟೆಗೆ ಪೊಲೀಸರು ಮನೆಗೆ ಬಂದು ಬಂಧಿಸಿದ್ದಾರೆ. ಮೂರು ವರ್ಷ ಜೈಲು ಪಾಲಾಗುವ ಜಾಮೀನು ರಹಿತ ಕಲಂಗಳನ್ನು ಅಹ್ಮದ್ ವಿರುದ್ಧ ಹಾಕಲಾಗಿದೆ. ಇದನ್ನು ವಕೀಲರು ಪ್ರಶ್ನಿಸಿದ್ದರಿಂದ ಅಹ್ಮದ್‍ಗೆ ಜಾಮೀನು ಸಿಕ್ಕಿದೆ. ತನಗೆ ಪಾಠ ಕಲಿಸುವುದು ಪೊಲೀಸರ ಉದ್ದೇಶವಾಗಿತ್ತು. ಮನೆಯಿಂದ ದೂರದಲ್ಲಿರುವ ಇನ್ನೊಂದು ಪೊಲೀಸ್ ಠಾಣೆಗೆ ತನ್ನನ್ನು ಕೊಂಡೊಯ್ಯಲಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಬರೆದದ್ದೇಕೆ?ಎಂದವರು ಪ್ರಶ್ನಿಸಿದ್ದಾರೆ. ಇದಕ್ಕಿಂತ ಹಿಂದೆಯೂ ಅಧಿಕಾರಿಗಳಿಂದ ಕೆಟ್ಟ ಅನುಭವ ಆಗಿದೆ ಎಂದು ಅವರು ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.