ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶ ಎ.29: ಕೊರೋನಾ ಲಾಕ್ ಡೌನ್ ನ ಮಧ್ಯೆ ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಭೇದ ಭಾವಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿರುವಾಗಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೋರ್ವ ತರಕಾರಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯೋರ್ವರಿಗೆ ಬೆದರಿಕೆ ಹಾಕಿ, ಓಡಿಸಿದ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಚರ್ಕಾರಿ ಪ್ರದೇಶದ ಬಿಜೆಪಿ ಪಕ್ಷದ ಶಾಸಕ ಬ್ರಿಜ್ ಭೂಷಣ್ ಶರಣ್, ತನ್ನ ಮಗನೊಂದಿಗೆ ಸೈಕಲ್ ನಲ್ಲಿ ತರಕಾರಿ ವ್ಯಾಪಾರ ಮಾಡಲು ಬಂದ ಮುಸ್ಲಿಂ ವ್ಯಾಪಾರಸ್ಥನ ಬಳಿ ಮೊದಲು, ನಿನ್ನ ಹೆಸರೇನು? ಎಂದು ವಿಚಾರಿಸಿದರು. ಈ ಸಂದರ್ಭದಲ್ಲಿ ಭಯಗೊಂಡ ವ್ಯಾಪಾರಿ ರಾಜ್ ಕುಮಾರ್ ಎಂದು ತಿಳಿಸಿದ್ದಾನೆ. ಇದರಿಂದ ಸುಮ್ಮನಿರದ ಶಾಸಕ ಭೂಷಣ್, ನಿಜ ಹೇಳು. ಇಲ್ಲದಿದ್ದರೆ ಹಲ್ಲೆ ನಡೆಸಿ ಸರಿಯಾದ ಹೆಸರೇನೆಂದು ತಿಳಿದುಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿ, ಬಳಿಕ ವ್ಯಾಪಾರಿಯ ಜತೆ ಇದ್ದ ಹುಡುಗನ ಬಳಿ, ನೀನು ನಿಜವಾದ ಹೆಸರು ಹೇಳು. ಇಲ್ಲವಾದಲ್ಲಿ ನಿನ್ನ ಅಪ್ಪನನ್ನು ಜೈಲಿಗೆ ಕಳುಹಿಸುತ್ತೇನೆ ಎಂದಾಗ, ಹುಡುಗ ಭಯಭೀತಗೊಂಡು ಅಝೀಝುರ್ರಹ್ಮಾನ್ ಎಂದು ತಿಳಿಸಿರುವುದು ವೈರಲ್ ಆದ ವೀಡಿಯೋ ದಲ್ಲಿ ದಾಖಲಾಗಿದೆ.
ಇದರಿಂದಾಗಿ ಮತ್ತೆ ಕೋಪಗೊಂಡ ಬಿಜೆಪಿ ಶಾಸಕ ಬ್ರಿಜ್ ಭೂಷಣ್, ಮುಸ್ಲಿಂ ಹೆಸರಿಟ್ಟಕೊಂಡು ಸುಳ್ಳು ಹೇಳ್ತೀಯಾ…ಈ ಪ್ರದೇಶದಲ್ಲಿ ಇನ್ಮುಂದೆ ನೀನು ಕಾಣ್ಬಾರ್ದು ಎಂದು ಬೆದರಿಕೆ ಒಡ್ಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
ಯುಎಇ ಯ ರಾಜಕುಮಾರಿ ಹಿಂದ್ ಅಲ್ ಖಾಸಿಮಿ, ಭಾರತದಲ್ಲಿ ನಡೆಯುತ್ತಿರುವ ಕೋಮು ತಾರತಮ್ಯವನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಚರ್ಚೆ ನಡೆಸುತ್ತಿರುವಾಗಲೇ ಇಂತಹ ಘಟನೆಗಳು ನಡೆಯುತ್ತಲೇ ಇದ್ದು, ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಹಲವಾರು ಟ್ವಿಟ್ಟಿಗರು ಬಿಜೆಪಿ ಶಾಸಕನ ನಡೆಯನ್ನು ಖಂಡಿಸಿ, ಮಂಗಳಾರತಿ ಮಾಡಿದ್ದಾರೆ.
Here is the video pic.twitter.com/txueQOwBDO
— Anil Tiwari (@Interceptors) April 29, 2020
ಓದುಗರೇ,sanmarga ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












