ಭಾರತಕ್ಕೆ ಕಳುಹಿಸಿದ್ದ ಮೃತದೇಹಗಳನ್ನು ಯುಎಇಗೆ ವಾಪಾಸು ಕಳುಹಿಸಿರುವುದು ದುಃಖಕರ- ರಾಯಬಾರಿ ಪವನ್ ಕಪೂರ್

0
1741

ಸನ್ಮಾರ್ಗ ವಾರ್ತೆ

ದುಬೈ: ಯುಎ‌ಇಯಿಂದ ಭಾರತಕ್ಕೆ ಕಳುಹಿಸಲಾಗಿದ್ದ ಮೂವರು ಭಾರತೀಯರ ಮೃತದೇಹಗಳನ್ನು ವಾಪಸ್‌ ಕಳುಹಿಸಿರುವುದು ದುಃಖದಾಯಕವಾಗಿದೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರಿ ಪವನ್ ಕಪೂರ್ ಹೇಳಿದ್ದಾರೆ. ಕೋವಿಡ್-19 ಅಥವಾ ಬೇರೆ ಯಾವುದೇ ರೋಗಗಳು ಇಲ್ಲದಿರುವುದನ್ನು ಪರೀಕ್ಷಿಸಿ ಪರಿಶೀಲಿಸಿ ಪ್ರಮಾಣೀಕರಿಸಿದ ಬಳಿಕ ಮೂರು ಮೃತದೇಹಗಳನ್ನು ಭಾರತಕ್ಕೆ ಕಳುಹಿಸಿಕೊಡಲಾಗಿತ್ತು ಎಂದವರು ಈ ಸಂದರ್ಭದಲ್ಲಿ ತಿಳಿಸಿದರು‌.

ಯುಎಇಯಿಂದ ಕಾರ್ಗೋ ವಿಮಾನದಲ್ಲಿ ಕಳುಹಿಸಲಾದ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣದಿಂದ ಅಧಿಕಾರಿಗಳು ವಾಪಸ್ಸು ಯುಎಇಗೇ ಕಳುಹಿಸಿದ್ದಾರೆ. ಇದೇ ವೇಳೆ, ಕೋರೋನಾ ರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಮೃತದೇಹ ಇದರಲ್ಲಿ ಇಲ್ಲವೆಂದು ಕೋರೋನಾವನ್ನೇ ಕಾರಣವನ್ನಾಗಿಸಿ ಮರತದೇಹಗಳನ್ನು ವಾಪಸು ಕಳುಹಿಸಿರುವ ಅಧಿಕಾರಿಗಳ ನಡೆಯು ಖಂಡನಾರ್ಹ ಎಂದು ಅವರು, ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು

ಪ್ರಯಾಣಿಕರನ್ನು ಹೊತ್ತು ತರುವ ವಿಮಾನಗಳಿಗೆ ನಿಷೇಧವನ್ನು ಹೇರಿದ ಬಳಿಕ ಸರಕು ಸಾಗಾಟಕ್ಕಿರುವ ಕಾರ್ಗೋ ವಿಮಾನಗಳು ಮಾತ್ರ ಸಂಚರಿಸುತ್ತಿದ್ದು, ಈ ವಿಮಾನದ ಮೂಲಕ ಭಾರತಕ್ಕೆ ಮೃತದೇಹಗಳನ್ನು ಕಳುಹಿಸಲಾಗಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ಜಗಸೀರ್ ಸಿಂಗ್, ಸಂಜೀವ್ ಕುಮಾರ್ ಹಾಗೂ ಕಮಲೇಶ್ ಭಟ್ ಎಂಬುವವರ ಮೃತದೇಹಗಳನ್ನು ದೆಹಲಿ ಪೊಲೀಸರು ವಾಪಸು ಕಳುಹಿಸಿದ್ದಾರೆ. ಸಂಬಂಧಪಟ್ಟ ಸಂಬಂಧಿಕರು ವಿಮಾನ ನಿಲ್ದಾಣದಲ್ಲಿ ಮೃತದೇಹಗಳನ್ನು ವಶಕ್ಕೆ ಒಪ್ಪಿಸುವಂತೆ ಅತ್ತ ಕಣ್ಣೀರು ಹರಿಸಿದರೂ ಕೂಡ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಮೃತದೇಹಗಳನ್ನು ಇಳಿಸಲೂ ಬಿಡದೇ ಯುಎಇಗೆ ವಾಪಸು ಕಳುಹಿಸಿರುವುದಾಗಿ ಕೇಳಿ ಬಂದಿದೆ.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ