ನನ್ನ ಬರಹಕ್ಕೆ ಬದ್ಧನಾಗಿರುವೆ, ಕುವೈಟ್ ಗೆ ಕೃತಜ್ಞತೆಗಳು- ಝಫರುಲ್ ಇಸ್ಲಾಮ್ ಖಾನ್

0
1260

ಸನ್ಮಾರ್ಗ ವಾರ್ತೆ

ನವದೆಹಲಿ, ಮೇ ಮುಸ್ಲಿಮರ ವಿರುದ್ಧ ತಾರತಮ್ಯ ಮತ್ತು ದ್ವೇಷ ಪ್ರಚಾರವನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದ ದೆಹಲಿಯ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಮ್ ಖಾನ್ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕೆಂದು ಬಿಜೆಪಿ ಶಾಸಕರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾನ್ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ. ವಿರೋಧ ಪಕ್ಷದ ನಾಯಕ ಬಿಜೆಪಿಯ ರನ್ವೀರ್ ಬಿದುರಿ ಅವರ ನೇತೃತ್ವದಲ್ಲಿರುವ ಶಾಸಕರ ತಂಡವು ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿಯಾಗಿ ಖಾನ್ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದೆ.

ಅವರ ಫೇಸ್ಬುಕ್ ಪೋಸ್ಟ್ ಭಾರತದ ಏಕತೆ, ಸಮಗ್ರತೆಗೆ ಅಪಾಯಕಾರಿ ಮತ್ತು ಭಾರತದ ಜಾತ್ಯತೀತ ಸ್ವರೂಪಕ್ಕೆ ಕಳಂಕವೆಂದೂ ಹಾಗೂ ಹಿಂದೂ-ಮುಸ್ಲಿಮರ ನಡುವೆ ದ್ವೇಷಕ್ಕೆ ಪ್ರಚೋದನೆ ಎಂದೂ ಈ ಶಾಸಕರು ಆರೋಪಿಸಿದ್ದಾರೆ.

ಆದರೆ ತಾನು ತನ್ನ ಬರಹಕ್ಕೆ ಬದ್ಧನೆಂದು ಹೇಳಿರುವ ಖಾನ್, ತನ್ನ ಬರಹವನ್ನು ತಿರುಚಿದ ಕೆಲವು ಖಾಸಗಿ ಟಿವಿ ಚಾನಲ್ ಗಳ ವಿರುದ್ಧ ತಾನು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಏಪ್ರಿಲ್ 28ಕ್ಕೆ ತಾನು ಪೋಸ್ಟ್ ಹಾಕಿರುವೆ ಎಂದ ಅವರು ಭಾರತೀಯ ಮುಸ್ಲಿಮರಿಗೆ ಬೆಂಬಲವಾಗಿ ನಿಂತದ್ದಕ್ಕೆ ಅವರು ಕುವೈಟ್ ಸರಕಾರಕ್ಕೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.