ಪಾಕಿಸ್ತಾನದಿಂದ ವಿದೇಶಕ್ಕೆ ಪಾರಾದ ಪತ್ರಕರ್ತನ ನಿಗೂಢ ಸಾವು

0
638

ಸನ್ಮಾರ್ಗ ವಾರ್ತೆ

ಸ್ಟಾಕ್‍ಹೋಮ್,ಮೇ 2: ಸ್ವೀಡನ್‍ನಲ್ಲಿ ಆಶ್ರಯ ಪಡೆದುಕೊಂಡಿದ್ದು ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಬೆದರಿಕೆ ಎದುರಿಸುತ್ತಿದ್ದ ಪತ್ರಕರ್ತ ಸಾಜಿದ್ ಹುಸೈನ್ ಮೃತಪಟ್ಟ ಸ್ಥಿತಿಯಲ್ಲಿ ಸ್ಟಾಕ್‍ಹೋಮ್‍ನ ಸಮೀಪದ ಅಪ್ಸಪಾ ನದಿ ತೀರದಲ್ಲಿ ಪತ್ತೆಯಾಗಿದೆ.

ಪಾಕಿಸ್ತಾನದಿಂದ ಅವರು ಕೊಲೆ ಬೆದರಿಕೆಯ ಹಿನ್ನೆಲೆಯಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದರು. ಕಳೆದ ಮಾರ್ಚ್23ಕ್ಕೆ ಸ್ಟಾಕ್‌ಹೋಮ್‌ ನಿಂದ ಸಾಜಿದ್ ಕಾಣೆಯಾದರು. ಎಪ್ರಿಲ್ 23ಕ್ಕೆ ಸ್ಟಾಕ್‍ಹೋಂ ನದಿ ತೀರದಲ್ಲಿ ಮೃತದೇಹ ಕಂಡು ಬಂತು. ಸಾಜಿದ್‍ರ ಸಾವು ಅಸಹಜವಾಗಿದ್ದೆಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ.

ಬಲೂಚಿಸ್ತಾನ್ ಟೈಮ್ಸ್ ಎಂಬ ಆನ್‍ಲೈನ್ ಮಾಧ್ಯಮದಲ್ಲಿ ಸಾಜಿದ್ ಚೀಫ್ ಎಡಿಟರ್ ಆಗಿದ್ದರು. ಬಲೂಚಿಸ್ತಾನದ ಮಾದಕ ವಸ್ತು ಕಳ್ಳಸಾಗಾಟ, ಜನರ ಅಪಹರಣ, ಭಯೋತ್ಪಾದನೆಯ ವಿರುದ್ಧ ನಿರಂತರ ಧ್ವನಿ ಎತ್ತಿದ್ದರು.

ಪಾಕಿಸ್ತಾನದಿಂದ ಸ್ವೀಡನ್ ತಲುಪುವ ಮೊದಲು ಅವರು ಯುಎಇ, ಉಗಾಂಡ, ಒಮನ್‍ಗಳಲ್ಲಿದ್ದರು. ಸ್ವೀಡನ್‍‌ನಲ್ಲಿ ಒಂದು ಚಿಕ್ಕ ಪಾರ್ಟ್‌ಟೈಮ್ ಕೆಲಸ ಮಾಡಿ ಗೆಳೆಯನ ಜೊತೆಗೆ ಉಳಿದು ಕೊಂಡಿದ್ದರು. ಪತ್ನಿ ಮಕ್ಕಳನ್ನು ಸ್ವೀಡನ್‍ಗೆ ಕರೆಯಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದರು. ಇದೇ ವೇಳೆ, ಅವರು ನಿಗೂಢವಾಗಿ ಮೃತಪಟ್ಟಿದ್ದಾರೆ.

 

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ