ಸನ್ಮಾರ್ಗ ವಾರ್ತೆ
ಪೆಂಗ್ಯೂಂಗ್ ಮೇ 2: ಮೂರು ವಾರದ ಬಳಿಕ ಉತ್ತರಕೊರಿಯದ ನಾಯಕ ಕಿಮ್ ಜೊಂಗ್ ಉನ್ ಸಾರ್ವಜನಿಕ ವೇದಿಕೆಯಲ್ಲಿ ಪ್ರತ್ಯಕ್ಷವಾದರು ಎಂದು ಕೊರಿಯದ ಸುದ್ದಿ ಸಂಸ್ಥೆ ಕೆಸಿಎನ್ಎ ವರದಿ ಮಾಡಿದ್ದು ಕಿಂ ಜೊಂಗ್ ಮೃತಪಟ್ಟಿದ್ದಾರೆನ್ನುವ ವದಂತಿಗಳಿಗೆ ಈ ರೀತಿ ಬ್ರೇಕ್ ಬಿದ್ದಿದೆ.
ನಿನ್ನೆ, ವಿಶ್ವ ಕಾರ್ಮಿಕರ ದಿನವಾದ ಮೇ ಒಂದರಂದು ಉತ್ತರ ಕೊರಿಯದ ರಾಜಧಾನಿ ಪೊಂಗ್ಯಾಂಗ್ ಸಮೀಪ ಪ್ರದೇಶ ಸುನ್ಚೊನ್ನ ಗೊಬ್ಬರ ನಿರ್ಮಾಣ ಫ್ಯಾಕ್ಟರಿಯ ಉದ್ಘಾಟನೆಗೆ ಕಿಂ ಜೊಂಗ್ ಉನ್ ಬಂದಿದ್ದರು. ಸಹೋದರಿ ಕಿಂ ಯೊ ಜೊಂಗ್ ಅವರ ಜೊತೆ ಇದ್ದರು.
ಕೆಂಪು ರಿಬ್ಬನ್ ಕತ್ತರಿಸಿ ಕಿಂ ಜೊಂಗ್ ಉದ್ಘಾಟನೆ ನಡೆಸಿದ ಫೋಟೊ ಹೊರ ಬಿಡಲಾಗಿದೆ. ಇದೇ ವೇಳೆ ಕೆಸಿಎನ್ಎ ಪ್ರಕಟಿಸಿದ ಫೋಟೊದ ಅಧಿಕೃತತೆ ದೃಢಪಟ್ಟಿಲ್ಲ. ಕಿಮ್ರ ಚಿತ್ರದ ಕುರಿತು ಕೇಳಿದಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಇಲ್ಲ ಎಂದು ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












