ಲಾಕ್‍ಡೌನ್ ಮುಂದುವರಿದರೆ ಕೊರೊನಾಕ್ಕಿಂತಲೂ ಹೆಚ್ಚು ಜನರು ಹಸಿವಿನಿಂದ ಸಾಯಬಹುದು- ಇನ್ಫೋಸಿಸ್ ನಾರಾಯಣ ಮೂರ್ತಿ

0
587

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮೇ.2: ಲಾಕ್‍ಡೌನ್ ಮುಂದುವರಿದರೆ ಕೊರೊನಾ ಸೋಂಕಿನಿಂದ ಜನರು ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಸಿವಿನಿಂದ ಜನರು ಸಾಯಲಿದ್ದಾರೆ ಎಂದು ಇನ್ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.

ಕೊರೊನಾ ಸೋಂಕಿನ ಹೆದರಿಕೆಯ ನಡುವೆಯೇ ಜೀವನ ಮುಂದೆ ಸಾಗಿಸಲು ಆಗಬೇಕು. ದೇಶದಲ್ಲಿ ನಿಯಂತ್ರಣದಲ್ಲಿ ಸಡಿಲಿಕೆ ಮಾಡಿ ಕಟ್ಟುನಿಟ್ಟಿನ ಸುರಕ್ಷೆಯೊಂದಿಗೆ ಜನರಿಗೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣಗೊಳ್ಳಬೇಕಾಗಿದೆ. ಭಾರತಕ್ಕೆ ಹೆಚ್ಚು ಸಮಯ ಲಾಕ್‍ಡೌನ್‍ನೊಂದಿಗೆ ಮುಂದೆ ಹೋಗಲು ಆಗದು. ಹೀಗೆಯೇ ಮುಂದುವರಿದರೆ ಒಂದು ಹಂತದಲ್ಲಿ ಕೊರೊನಾ ಸಾವಿಗಿಂತ ಹೆಚ್ಚು ಹಸಿವಿನಿಂದ ಸಾವು ಸಂಭವಿಸಬಹುದು ಎಂದು ಅವರು ನುಡಿದರು.

ಈ ಹಿಂದೆ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಲಾಕ್‍ಡೌನ್ ಮುಂದುವರಿಸುವುದನ್ನು ವಿರೋಧಿಸಿದ್ದರು.
ರಾಹುಲ್ ಗಾಂಧಿಯವರೊಡನೆ ಚರ್ಚಿಸಿದಾಗ ರಘುರಾಮ್ ರಾಜನ್ ಲಾಕ್‍ಡೌನ್ ಮೂಲಕ ಸಂಕಷ್ಟಕ್ಕೆ ಬಿದ್ದ ಜನಸಾಮಾನ್ಯರ ರಕ್ಷಣೆಗೆ 65,000 ಕೋಟಿ ರೂಪಾಯಿ ಅಗತ್ಯವಿದೆ ಎಂದು ಅವರು ಹೇಳಿದ್ದರು.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ