ರೋಗಿ ಸಾವು: ಉದ್ರೀಕ್ತ ಸಂಬಂಧಿಕರಿಂದ ಆಸ್ಪತ್ರೆಗೆ ಕಲ್ಲೆಸೆತ

0
969

ಸನ್ಮಾರ್ಗ ವಾರ್ತೆ

ಕೊಲ್ಕತಾ,ಎ.2: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯು ಚಿಕಿತ್ಸೆಯ ವೇಳೆ ಮೃತಪಟ್ಟ ಹಿನ್ನೆಲೆಯಲ್ಲಿ ಕೊಲ್ಕತಾದ ಸರಕಾರಿ ಆಸ್ಪತ್ರೆಗೆ ಕಲ್ಲೆಸೆದು ರೋಗಿಯ ಸಂಬಂಧಿಕರು, ಗೆಳೆಯರು ದಾಂಧಲೆ ಮಾಡಿದ್ದಾರೆ. ಕೊಲ್ಕತಾದಿಂದ 15ಕಿ.ಮೀ ದೂರದ ಕುಮಾರ್‌ಹಟಿಯ ಸಾಗೋರ್ ದತ್ತ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಹಾನಿಗೀಡಾದ ಆಸ್ಪತ್ರೆಯ ಫೋಟೊವನ್ನು ಪೊಲೀಸರು ಹೊರಬಿಟ್ಟಿದ್ದು, ಘಟನಾನಂತರ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ಈಗ ಶಾಂತವಾಗಿದ್ದು ಮೂರು ಮಂದಿ ದಾಂಧಲೆಕೋರರನ್ನು ಬಂಧಿಸಲಾಗಿದೆ.

ಗುರುವಾರ ರಾತ್ರೆ 65 ವರ್ಷದ ಮಹಿಳೆಯಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಕರೆ ತರಲಾಗಿತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಶುಕ್ರವಾರ ಅವರು ಮೃತಪಟ್ಟರು. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆ ಮೇಲೆ ದಾಳಿ ಮಾಡಿ ಪುಡಿಪುಡಿ ಮಾಡಲು ಯತ್ನಿಸಿದರು. ಘಟನೆಯ ಕುರಿತು ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ