ಸನ್ಮಾರ್ಗ ವಾರ್ತೆ
ಕೌಲಂಲಪುರ,ಮೇ2: ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲಿ ಉಳಿದುಕೊಂಡಿದ್ದಾರೆ ಎಂದು ಆರೋಪಿಸಿ ನೂರಾರು ಭಾರತೀಯರ ಸಹಿತ 1457 ಮಂದಿಯನ್ನು ಮಲೇಷ್ಯಾ ಸರಕಾರ ಬಂಧಿಸಿದೆ. ಇದರಲ್ಲಿ ಬಹುಭಾಗ ಭಾರತೀಯರೇ ಇದ್ದು ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಸೇರಿದವರು ಎಂದು ವರದಿ ತಿಳಿಸಿದೆ.
ಇಮಿಗ್ರೇಶನ್ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇವರನ್ನು ಜೈಲಿಗೆ ಹಾಕಿದೆ. ಈ ಹಿಂದೆಯೂ ಇಂತಹ ಬಂಧನಗಳು ಮಲೇಶ್ಯದಲ್ಲಿ ನಡೆಯುತ್ತಿದ್ದವಾದರೂ ಕೊರೊನಾ ವ್ಯಾಪಿಸಿದ ಬಳಿಕ ಮೊದಲ ಬಾರಿ ಇಷ್ಟು ಜನರನ್ನು ಜೈಲಿಗೆ ಹಾಕಲಾಯಿತು.
ಇವರಿಗೆ ವಾರಗಳಿಂದ ಆಹಾರ, ವಾಸದ ವ್ಯವಸ್ಥೆ ಇತ್ಯಾದಿ ಸರಕಾರ ಕೊಡ ಮಾಡಿತ್ತು. ಆದರೆ ಅನಿರೀಕ್ಷಿತವಾಗಿ ದಾಳಿ ಮತ್ತು ಬಂಧನ ನಡೆದಿದೆ. ಕೊರೊನಾ ವ್ಯಾಪಿಸಿದ ನಂತರ ಮಲೇಷ್ಯಾದಲ್ಲಿ ಜಾರಿಗೆ ಬಂದ ಕೊರೊನಾ ಲಾಕ್ಡೌನ್ನಲ್ಲಿ ಸಡಿಲಿಕೆಯನ್ನು ಮಾಡಲಾಗಿತ್ತು.
ಓದುಗರೇ, sanmarga ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ












